×
Ad

ಕಲಬುರಗಿ | ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ

Update: 2025-06-30 19:03 IST

ಕಲಬುರಗಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ಹಿಟ್ಲರ್ ಗೆ ಹೋಲಿಸಿರುವುದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ ಸರಡಗಿ ಅವರ ನೇತೃತ್ವದಲ್ಲಿ ನಾಗನಹಳ್ಳಿ ರಸ್ತೆಯಿಂದ ಬಿಜೆಪಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಸೋಮವಾರ ನಡೆದಿದೆ.

ಈ ವೇಳೆ ಮಾತನಾಡಿದ ಶಕೀಲ್ ಸರಡಗಿ, ಹಿಟ್ಲರ್ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ, ಬದಲಾಗಿ ಬಿಜೆಪಿ ಪಕ್ಷದಲ್ಲೇ ಇದ್ದಾರೆ. ಯಾಕೆಂದರೆ ಬಿಜೆಪಿಯಲ್ಲಿ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿಕೆ ನೀಡುತ್ತಾರೆ, ಇವರೇ ನಿಜವಾದ ಹಿಟ್ಲರ್ ವಾದಿಗಳಾಗಿದ್ದಾರೆ. ಕೇಂದ್ರ ಸರಕಾರದಿಂದ ಯಾವುದೇ ಒಂದು ಯೋಜನೆಗಳು ಜನರತ್ತ ತಲುಪುತ್ತಿಲ್ಲ. ಬಿಜೆಪಿ ಸರಕಾರದಲ್ಲಿ ಕೇವಲ ಹಿಂದೂ ಮುಸ್ಲಿಂ ಮಧ್ಯೆ ಜಗಳ ಹಚ್ಚುವುದೇ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಪಾಟೀಲ್ ಝಳಕಿ, ಶಿವಾನಂದ ಹೋನಗುಂಟಿ, ಅಮರ ಶಿರವಾಳ, ಪರಶುರಾಮ ನಾಟಿಕಾರ್, ಕಾರ್ತಿಕ್ ನಾಟಿಕಾರ, ಎಝಜ್ ನಿಂಬಾಳಕರ್, ರಾಜು ಮಳಗಿ, ಟೈಗರ್ ವಿಘ್ನಶ್ವರ್, ಗಣೇಶ್ ನಾಗನಳ್ಳಿ, ಅಸ್ಲಾಂ ಸಿಂದಗಿ, ಅಸ್ವಾನ್, ಶರಫುದ್ದಿನ್ ಮಿಸ್ತ್ರಿ, ಕಾರ್ತಿಕ್ ಹೊಸಮನಿ, ಕಿರಣ್ ಚವ್ಹಾಣ, ರಾಮಪ್ರಸಾದ್ ಕಾಂಬಳೆ, ಶೇಖ್ ಸಮರಿನ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News