×
Ad

ಕಲಬುರಗಿ | ಸಿಯುಕೆಯಲ್ಲಿ ಸಂವಿಧಾನ ಹತ್ಯಾ ದಿವಸ್ ಆಚರಣೆ

Update: 2025-06-26 22:09 IST

ಕಲಬುರಗಿ: "ಸ್ವಾತಂತ್ರ್ಯ ಪೂರ್ವ ವಸಾಹತುಶಾಹಿ ಕಾಲಕ್ಕಿಂತ ತುರ್ತು ಪರಿಸ್ಥಿತಿ ಅತ್ಯಂತ ಕೆಟ್ಟ ಅನುಭವವಾಗಿತ್ತು. ಸಾಮಾಜಿಕ ಅಶಾಂತಿ ಇತ್ತು ಮತ್ತು ಮೂಲಭೂತ ಹಕ್ಕುಗಳನ್ನು ಬಂಧಿಸಲಾಯಿತು ಮತ್ತು ನಾಗರಿಕರ ಮೇಲೆ ಕುಟುಂಬ ಯೋಜನೆಯನ್ನು ಹೇರಲಾಯಿತು. ಯಾವುದೇ ಕಾರಣವಿಲ್ಲದೆ ಪ್ರತಿಯೊಬ್ಬರನ್ನು ಬಂಧಿಸಲು ಎಂಐಎಸ್‍ಎ ಕಾಯ್ದೆ (ಆಂತರಿಕ ಭದ್ರತಾ ನಿರ್ವಹಣೆ ಕಾಯ್ದೆ)ಯನ್ನು ವಿಧಿಸಲಾಯಿತು" ಎಂದು ಸಿಯುಕೆ ಉಪಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.

ಆಳಂದ ತಾಲೂಕಿನ ಕಡಗಂಚಿ ಬಳಿಯ ಸಿಯುಕೆನಲ್ಲಿ ಆಯೋಜಿಸಿದ್ದ 'ಸಂವಿಧಾನ ಹತ್ಯಾ ದಿವಸ್ 2025'ರ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಿಜಿಸ್ಟ್ರಾರ್ ಪ್ರೊ.ಆರ್. ಆರ್.ಬಿರಾದಾರ್, ಕಾರ್ಯಕ್ರಮದ ನೋಡಲ್ ಅಧಿಕಾರಿ ಪ್ರೊ.ಆರ್.ಎಸ್.ಹೆಗಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಡಾ.ಜಯದೇವಿ ಜಂಗಮಶೆಟ್ಟಿ ರಾಷ್ಟ್ರಗೀತೆಯನ್ನು ಹಾಡಿದರು. ಡಾ.ಭಾವನಾ ಅವರು ಅಧಿವೇಶನವನ್ನು ನಿರೂಪಿಸಿದರು ಮತ್ತು ಧನ್ಯವಾದಗಳನ್ನು ಅರ್ಪಿಸಿದರು.

ಡಾ.ರೇಣುಕಾ, ಡಾ.ಸಂಜೀವ್, ಡಾ.ಆನಂದ್, ಡಾ.ನಿರಂಜನ್, ಮುಖ್ಯಸ್ಥರು ಮತ್ತು ಡೀನ್‍ಗಳು ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News