ಕಲಬುರಗಿ| ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಡಿ.ದೇವರಾಜ ಅರಸರು: ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ
ಕಲಬುರಗಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ರವರು ಸಮಾಜದಲ್ಲಿದ್ದ ಬಡವರು, ನಿರ್ಗತಿಕರು, ಅಲೆಮಾರಿ ಜನಾಂಗದವರನ್ನು ಮತ್ತು ಹಿಂದುಳಿದ ವರ್ಗದ ಜನರ ಅಭಿವೃದ್ದಿಗಾಗಿ ಅವಿರತವಾಗಿ ಶ್ರಮಿಸುವುದರ ಮೂಲಕ ತಮ್ಮ ಸಾಮಾಜಿಕ ಸೇವೆಯನ್ನು ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹೇಳಿದ್ದಾರೆ.
ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲಬುರಗಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯದ ಮಾಜಿ ಮುಖಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರರಾದ ಡಿ.ದೇವರಾಜ ಅರಸು ರವರ 110ನೇ ಜನ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಫಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಐ.ಎ.ಎಸ್. ಮತ್ತು ಕೆ.ಎ.ಎಸ್. ತರಬೇತಿ ನೀಡಬೇಕೆಂದು ವಿವಿಧ ಸಂಘದವರಿಂದ ಮನವಿ ಪತ್ರ ಸ್ವೀಕರಿಸಲಾಗಿದ್ದು, ಇದನ್ನು ಸರ್ಕಾರದ ಗಮನಕ್ಕೆ ತಂದು ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಹೈದರಾಬಾದ್ ಮತ್ತು ಬೆಂಗಳೂರು ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿ ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳನ್ನು ಎದುರಿಸುವ ಮುಖಾಂತರ ಪ್ರತಿಯೊಬ್ಬರು ಸಾಧನೆ ಮಾಡಬೇಕೆಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಡಿ. ದೇವರಾಜ್ ಅರಸು ಅವರು ತಮ್ಮ ಅಧಿಕಾರ ಅವಧಿಯಲ್ಲಿ ಶಾಂತಿಯುತವಾಗಿ ಸಾಮಾಜಿಕ ಕ್ರಾಂತಿ ಮಾಡುವುದರ ಮುಖಾಂತರ ಹೆಚ್ಚಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ ಮಹಾನ ವ್ಯಕ್ತಿ ಎಂದರು.
ಗ್ಯಾರೆಂಟಿ ಯೋಜನಾ ಸಮಿತಿಯ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಮಾತನಾಡಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ರವರು ತಮ್ಮ ಅಧಿಕಾರ ಅವಧಿಯಲ್ಲಿ ಬಳಷ್ಟು ಜನಪರ ಕಾರ್ಯಗಳು ಮಾಡುವುದರ ಮುಖಾಂತರ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಳಾಗಿ ಬಿ.ಎಂ.ರಾವೂರ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಮಹಾನ್ ವ್ಯಕ್ತಿ ಡಿ.ದೇವರಾಜ್ ಅರಸು ಅವರು ತಮ್ಮ ಬಿ.ಎಸ್.ಸಿ. ಪದವಿ ಮುಗಿಸಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಹಿಂದುಳಿದ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ, ಅಲ್ಲದೆ ಹಲವು ಕಾಯ್ದೆಗಳನ್ನು ಜಾರಿಗೆ ತರುವ ಮುಖಾಂತರ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ ರಾಜಕೀಯ ಮುತ್ಸದಿ ಕೂಡ ಅವರಾಗಿದ್ದಾರೆ ಎಂದು ವಿವರಿಸಿದರು.
2024-25ನೇ ಸಾಲಿನ ಸ್ನಾತಕೋತರ ಪದವಿಯ ಎಂ.ಎಸ್.ಸಿ. (ಬಿ.ಟಿ.)ಪ್ರಥಮ ಸ್ಥಾನ, ಶ್ವೇತ ಪ್ರಕಾಶ ಸಿಂಗ್, ದ್ವಿತೀಯ, ಶಿವಕುಮಾರ ಪೇಮನಗೌಡ, (ಸಿ.ಜಿ.ಪಿ)., ಎಂ.ಎ ಯಲ್ಲಿ ಚನ್ನಮ್ಮ ಸದಾಶಿವ, ಈರಮ್ಮ, ಶಿವಮೂರ್ತಿ, ದೀಪಾ ರಮೇಶ, ಎಂ.ಎಸ್.ಡಬ್ಲೂ, ಚೈತ್ರ ಬಸವರಾಜ ಎಂ.ಕಾಂ, ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.
ಪದವಿ ಪರೀಕ್ಷೆಯಲ್ಲಿ ಗಂಗಾ ರಮೇಶ, ಅಭಿಷೇಕ ಪ್ರೇಮಕುಮಾರ, ಪರೀಕೆ ಪಿ.ಯು.ಸಿ. ಮಹೇಶ್ವರಿ ನಾಗಪ್ಪ, ಶೃತಿ ಲಕ್ಷ್ಮಣ, ಚನ್ನಮ್ಮ ಸುರೇಶ ಸೇರಿದಂತೆ ಎಸ್.ಎಸ್.ಎಲ್.ಸಿ. ಸಂಜನಾ, ರತ್ನಾ ನಾಯಕ ಸಾಯಿಕುಮಾರ, ದಿಲೀಪ ಕುಮಾರ, ಸಿದ್ರಮ್ಮ ದಯಾನಂದ ಸಹನಾ ಹಣಮಂತ ಸೇರಿದಂತೆ ಪ್ರಥಮ, ದ್ವಿತೀಯ, ತೃತೀಯ, ಸನ್ಮಾನಿಸಲಾಯಿತು. ಅದೇ ರೀತಿಯಾಗಿ ಭಾಷಣ, ಸ್ಪರ್ಧೇ ಪ್ರಬಂಧ, ರಸ ಪ್ರಶ್ನೆ ಪಡೆದಂತಹ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಮೆರವಣಿಗೆಯು ಕಲಬುರಗಿ ನಗರದ ನಗರೇಶ್ವರ ಶಾಲೆಯಿಂದ ಬೆಳಿಗ್ಗೆ 9.00 ಗಂಟೆಗೆ ಡಿ.ದೇವರಾಜ್ ರವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರು ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು.
ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಜಗದೇವಪ್ಪ, ಶಂಕರ ಕಟ್ಟಿ ಸಂಗಾವಿ, ಸಚಿನ ಚವ್ಹಾಣ, ಶೇಖರ ಸಿಂಗ್,ವೀರಣ್ಣ ಗೌಡ, ಅಮೀರ ಹುಸೇನ್.ಆನಂದ ವಾರಿಕ್ ಮುಖಂಡರು. ಸೇರಿದಂತೆ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನಗಳು, ವಸತಿ ನಿಲಯದ ಮಕ್ಕಳು, ವಸತಿ ಶಾಲೆ ಮಕ್ಕಳು, ಹಿಂದುಳಿದ ತಾಲೂಕು ಮಟ್ಟದ ಅಧಿಕಾರಿಗಳು ಮುಖಂಡರು ಸಾಹಿತಿಗಳು ಅಧಿಕಾರಿಗಳು ಶಾಲಾ ಕಾಲೇಜಿನ ಮಕ್ಕಳು ವಸತಿ ನಿಲಯ ಮಕ್ಕಳು ಪಾಲಕರು ಪೋಷಕರು ಹಾಜರಿದ್ದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಉಪನಿರ್ದೇಶಕ ವೈ ಸೋಮಶೇಖರ ಅವರು ಸ್ವಾಗತಿಸಿದರು. ಬೆಳಮಗಿ ಮುರಾಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಅಣವೀರ ಕಾರ್ಯಕ್ರಮ ನಿರೂಪಿಸಿ, ವಂದಿಸಿದ್ದರು.