×
Ad

ಕಲಬುರಗಿ | ವಾಹನ ಚಾಲಕರಿಗೆ ಗುರುತಿನ ಚೀಟಿ ವಿತರಣೆ

Update: 2025-06-27 21:06 IST

ಕಲಬುರಗಿ: ನಗರದ ಕಲಾ ಮಂಡಲದಲ್ಲಿ ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಸಂಘದ ಸಂಸ್ಥಾಪಕರಾದ ಅರವಿಂದ ಕಮಲಾಪುರ ಅವರ ನೇತೃತ್ವದಲ್ಲಿ ವಾಹನ ಚಾಲಕರಿಗೆ ಜಾಗೃತಿ ಮತ್ತು ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಜರುಗಿತು.

ಜಿಲ್ಲಾ ಘಟಕ, ತಾಲೂಕು ಘಟಕ, ಗ್ರಾಮ ಘಟಕ, ಪದಾಧಿಕಾರಿಗಳೆಂದು ಅಧಿಕೃತವಾಗಿ ಘೋಷಿಸಲಾಯಿತು. ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಅಭಿವೃದ್ಧಿ ಸಂಘದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘಟನೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕೆಂದು ಸಂಘದ ಗೌರವ ಅಧ್ಯಕ್ಷ ಜಾಫರ್ ಸಾಧಿಕ್ ಕರೆ ನೀಡಿದ್ದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಧ್ಯಕ್ಷ ಜಗದೀಶ್ ದೇಸಾಯಿ, ಕಲ್ಯಾಣ ಕರ್ನಾಟಕದ ಉಪಾಧ್ಯಕ್ಷರಾದ ಸುಶೀಲಕುಮಾರ ಸರಜೋಳಗಿ, ಜಾಫರ್ ಸಾಧಿಕ್ ಬಳ್ಳಾರಿ, ಕಲ್ಯಾಣ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಬಲಾದ, ಕಲ್ಯಾಣ ಕರ್ನಾಟಕದ ಕಾರ್ಯದರ್ಶಿ ಶರಣು ಹೊಸಮನಿ, ಮುಖ್ಯ ಅತಿಥಿಗಳಾಗಿ ರವಿಕುಮಾರ ರೆಡ್ಡಿ, ಮೈನೊದ್ದಿನ್ ಬಳ್ಳಾರಿ, ಅಸ್ಲಾಂ ಬಳ್ಳಾರಿ, ಮೆಹಬೂಬ್ ಸಾಬ್ ಸೇರಿದಂತೆ ಜಿಲ್ಲಾ, ತಾಲೂಕು, ಗ್ರಾಮ ಘಟಕದ ಚಾಲಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News