×
Ad

ಕಲಬುರಗಿ | ಶಾಸಕ ಬಸವರಾಜ ಮತ್ತಿಮಡು ಅವರ ಹುಟ್ಟು ಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ಪರೀಕ್ಷಾ ಪ್ಯಾಡ್, ಪೆನ್ನು ವಿತರಣೆ

Update: 2025-03-04 00:18 IST

ಕಲಬುರಗಿ : ಶಾಸಕ ಬಸವರಾಜ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ನಾವೆಲ್ಲರೂ ಶಹಾಬಾದ್‌ ಸರಕಾರಿ ಶಾಲೆಯ ಮಕ್ಕಳಿಗೆ ಪರೀಕ್ಷಾ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಿದ್ದೆವೆ ಎಂದು ಬಿಜೆಪಿ ಮುಖಂಡ ಭೀಮರಾವ ಸಾಳುಂಕೆ ಹೇಳಿದರು.

ಅವರು ಸೋಮವಾರ ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ಅವರ ಜನ್ಮದಿನ ಪ್ರಯುಕ್ತ ನಗರದ ವಡ್ಡರಗೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮತ್ತಿಮಡು ಅಭಿಮಾನಿ ಬಳಗದವರು ಪರೀಕ್ಷಾ ಪ್ಯಾಡ್, ಪೆನ್ ವಿತರಿಸಿ ಮಾತನಾಡಿದರು.

ವ್ಯಕ್ತಿಯ ಹುಟ್ಟು ಹಬ್ಬವನ್ನು ಕಾಟಾಚಾರಕ್ಕೆ ಆಚರಿಸದೇ, ಅದರಿಂದ ಯಾರಿಗಾದರೂ ಲಾಭವಾದರೆ ಅದುವೇ ಸಾರ್ಥಕ ಜೀವನ. ಶಾಸಕರು ಮುಗಿದ ಕರವ, ಬಾಗಿದ ಶಿರವ ಎಂಬಂತೆ ಎಲ್ಲರೊಂದಿಗೆ ಬೆರೆಯುವ ಹಾಗೂ ಅಪ್ಪಿಕೊಳ್ಳುವ ವ್ಯಕ್ತಿತ್ವ. ಅಂತಹ ಜನಪ್ರೀಯ ಶಾಸಕರ ಹುಟ್ಟು ಹಬ್ಬವನ್ನು ನಮ್ಮ ಬಿಜೆಪಿ ಕಾರ್ಯಕರ್ತರು ಸರಕಾರಿ ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಂಡಿರುವುದು ನಿಜಕ್ಕೂ ಸಂತೋಷದಾಯಕ ಕ್ಷಣ ಎಂದರು.

ಮುಖಂಡರಾದ ಅರುಣ ಪಟ್ಟಣಕರ್, ಕನಕಪ್ಪ ದಂಡಗುಲಕರ ಹಾಗೂ ಜ್ಯೋತಿ ಶರ್ಮಾ ಮಾತನಾಡಿರು.

ಉಪಾಧ್ಯಕ್ಷರಾದ ಸಿದ್ರಾಮ ಕುಸಾಳೆ, ಶಾಲಾಭಿವ್ರದ್ದಿ ಸಮಿತಿ ಅಧ್ಯಕ್ಷ ರಮೇಶ ಗೋಟೆಕರ, ಮುಖ್ಯೋಪಾಧ್ಯಾಯ ಸಿದ್ರಾಮ, ಮಹಾದೇವ ಗೊಬ್ಬೂರಕರ, ಶಿವಕುಮಾರ ಇಂಗಿನಶೆಟ್ಟಿ, ಬಸವರಾಜ ಬಿರಾದಾರ, ಜಗದೇವ ಸುಬೆದಾರ, ಶಂಕರ ಬಗಾಡೆ, ಭಿಮಯ್ಯ ಗುತ್ತೆದಾರ, ರೇವಣಸಿದ್ದ ಮತ್ತಿಮಡು, ಶರಣು ಕೌಲಗಿ, ಶ್ರೀನಿವಾಸ ದೇವಕರ, ಪ್ರಭು ಪಾಟೀಲ, ಶಶಿಕಲಾ ಸಜ್ಜನ, ನಂದಾ ಗುಡೂರ, ಪದ್ಮಾ ಕಟಗೆ, ಸನ್ನಿಧಿ ಕುಲಕರ್ಣಿ, ನೀಲಗಂಗಮ್ಮ ಗಂಟ್ಲಿ, ವಿಜಯಲಕ್ಷ್ಮಿ ನಂದಿ ಶಾಲೆಯ ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ದೇವದಾಸ ಜಾಧವ ನಿರೂಪಿಸಿ, ಸ್ವಾಗತಿಸಿದರು. ದಿನೇಶ ಗೌಳಿ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News