ಕಲಬುರಗಿ | ಆಮಿಷದ ಒತ್ತಡಕ್ಕೆ ಒಳಗಾಗಿ ಮಾರಾಟಕ್ಕೆ ಬಲಿಯಾಗಬೇಡಿ : ನ್ಯಾ.ಚಿತ್ತರಗಿ
ಕಲಬುರಗಿ: ಆಮಿಷದ ಒತ್ತಡಕ್ಕೆ ಒಳಗಾಗಿ ಯಾವುದೇ ವ್ಯಕ್ತಿ ಮಾನವ ಕಳ್ಳ ಸಾಗಾಣಿಕೆಗೆ ಬಲಿಯಾಗಬಾರದು. ಕಾನೂನು ಅರಿವಿನ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅತೀ ಮುಖ್ಯವಾಗಿದೆ. ಈ ದಿಶೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು," ಎಂದು ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಜೆಎಂಎಫ್‌ಸಿ ಸದಸ್ಯ ಕಾರ್ಯದರ್ಶಿ ಕುಮಾರಿ ಸುಮನ್ ಚಿತರಗಿ ಅವರು ಹೇಳಿದರು.
ಆಳಂದ ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಬುಧವಾರ ಕರ್ನಾಟಕ ಸರ್ಕಾರದ "ನ್ಯಾಯ ನಿಮ್ಮದು, ನೆರವು ನಮ್ಮದು" ಯೋಜನೆಯಡಿ ತಾಲೂಕು ಕಾನೂನು ಸೇವಾ ಸಮಿತಿ, ಆಳಂದ ನ್ಯಾಯವಾದಿಗಳ ಸಂಘ ಮತ್ತು ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಮತ್ತು ಸ್ಥಳೀಯ ಸಮುದಾಯದಲ್ಲಿ ಕಾನೂನು ಅರಿವು ಮೂಡಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮಾನವ ಕಳ್ಳ ಸಾಗಾಣಿಕೆಯ ವಿರುದ್ಧ ಜಾಗೃತಿ ಮೂಡಿಸುವ ಈ ಪ್ರಯತ್ನವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಎಂ.ವಿ ಏಕೋಟೆ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಶ್ರೀಮಂತ ಹತ್ತರಕಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಮಲಾಕರ್ ವಿ.ರಾಥೋಡ್, ಸರ್ಕಾರಿ ವಕೀಲ ಇಸ್ಮಾಯಿಲ್ ಪಟೇಲ್ ಮತ್ತು ಜ್ಯೋತಿ ಬಂಡಿ, ನ್ಯಾಯವಾದಿ ಸಂಘದ ಕಾರ್ಯದರ್ಶಿ ಬಲಭೀಮ ಟಿ. ಸಿಂಧೆ, ನ್ಯಾಯವಾದಿ ದೇವಾನಂದ ಹೋದಲರಕರ್, ಸ್ವಾಮಿರಾವ್ ಚನ್ನಗುಂಡ, ಬಿ.ಐ ಶಿರೋಳೆ, ತಯಬ್ ಅಲಿ ಜರ್ದಿ ಮತ್ತು ಶಾಲೆಯ ಸಹ ಶಿಕ್ಷಕ ಬಸವರಾಜ ಪಾಟೀಲ, ಪದ್ಮಜಾ ಕಟಕೆ, ಶೈನಜ್ ಬೇಗಂ, ಆಸ್ಮಾ ಆಲಂ, ಆಸ್ಮಾ ಜೆಬೀನ್, ಮೇಹರುನ್ನಿಸಾ ಬೇಗಂ, ಶಾಹೀನ್ ಬೇಗಂ, ದಶರತ ಕಠಾರೆ, ದೇವಿಂದ್ರಪ್ಪ ಗೋಳಾ, ಮಹಾಂತಪ್ಪ ಬೊಪರೆಡ್ಡಿ, ಪ್ರಶಾಂತ ಪಾಟೀಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನ್ಯಾ.ಸುಧೀರ್ ಪಡಶೆಟ್ಟಿ ನಿರೂಪಿಸಿದರು. ಶಿಕ್ಷಕ ಮಲ್ಲಿನಾಥ್ ಖಜೂರಿ ಸ್ವಾಗತಿಸಿದರು, ನ್ಯಾಯವಾದಿ ಕಲ್ಯಾಣಿ ಶೇರಿಕಾರ ವಂದಿಸಿದರು.