×
Ad

ಕಲಬುರಗಿ | ಟ್ರಕ್‌ನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಚಾಲಕನ ಮೃತದೇಹ ಪತ್ತೆ : ಹೃದಯಾಘಾತ ಶಂಕೆ

Update: 2025-07-04 23:24 IST

ಕಲಬುರಗಿ: ಅಫಜಲಪುರ ತಾಲೂಕಿನ ಗಾಣಗಾಪುರದ ಟ್ರಕ್‌ವೊಂದರಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಚಾಲಕನ ಮೃತದೇಹ ಪತ್ತೆಯಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಮೃತರನ್ನು ಬಿಹಾರ ಮೂಲದ ಬೀರೇಂದ್ರ ಸಿಂಗ್ ಚೌಧರಿ (47) ಎಂದು ಗುರುತಿಸಲಾಗಿದೆ.

ಈ ಕುರಿತು ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಲ ಗಾಣಗಾಪೂರದಲ್ಲಿ ಬಸ್ ನಿಲ್ದಾಣ ಹತ್ತಿರ ಇರುವ ಅಂಬಿಗರ ಚೌಡಯ್ಯ ವೃತ್ತ ಹತ್ತಿರ ಟ್ರಕ್ ವೊಂದು ಎರಡು ದಿನದಿಂದ ನಿಲ್ಲಿಸಿಯೇ ಇರುವುದರಿಂದ ಅನುಮಾನ ಗೊಂಡ ಗ್ರಾಮಸ್ಥರು ಪೋಲಿಸರಿಗೆ ತಿಳಿಸಿದ್ದಾರೆ. ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಟ್ರಕನಲ್ಲಿ ಚಾಲಕ ಮಲಗಿರಬಹುದು ಎಂದು ಎಬ್ಬಿಸಲು ಹೋದಾಗ ಚಾಲಕ ಮೃತಪಟ್ಟ್‌ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News