ಕಲಬುರಗಿ | ಸಂಚಲನ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ
ಕಲಬುರಗಿ : ವಾಡಿ ಪಟ್ಟಣದ ಡಾ.ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಶನಿವಾರ ನಡೆದ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕೆಯ ಸಂಸ್ಥಾಪಕ ಸದಸ್ಯ ದೇವೇಂದ್ರ ಕರದಳ್ಳಿ, ಸಂಚಲನ ವೇದಿಕೆ ತನ್ನ ಸಾಹಿತ್ಯಿಕ ಚಟುವಟಿಕೆಗಳಿಂದ ಹಲವಾರು ಯುವಕವಿ ಮತ್ತು ಬರಹಗಾರರನ್ನು ರೂಪಿಸಿದೆ ಎನ್ನುವುದು ಒಂದು ಹೆಮ್ಮೆಯ ವಿಷಯ. 2018ರಲ್ಲಿ ಆರಂಭವಾದ ಸಂಚಲನೆ ವೇದಿಕೆ ವೈಚಾರಿಕ ಸಾಹಿತ್ಯ ಓದು ಸಂವಾದ ಕವಿಗೋಷ್ಠಿ ಉತ್ತಮ ಚಲನಚಿತ್ರ ವೀಕ್ಷಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಜ್ಯದ್ಯಂತ ಗುರುತಿಸಿಕೊಂಡು ಸಾಹಿತ್ಯಾಸಕ್ತರಲ್ಲಿ ಸಂಚಲನ ಮೂಡಿಸಿದೆ ಎಂದು ಹೇಳಿದರು.
ನೂತನ ಪದಾಧಿಕಾರಿಗಳು:
ಶ್ರಾವಣಕುಮಾರ ಮೋಸಲಗಿ (ಅಧ್ಯಕ್ಷ), ಸಿದ್ದರಾಜ ಮಲ್ಕಂಡಿ (ಉಪಾಧ್ಯಕ್ಷ), ರವಿ ಕೋಳಕೂರ (ಪ್ರಧಾನ ಕಾರ್ಯದರಗಶಿ), ಸಿದ್ದಾರ್ಥ ಗಂಗನವರ (ಸಹ ಕಾರ್ಯದರ್ಶಿ), ರಘುವೀರ ಪವಾರ (ಕೋಶಾಧ್ಯಕ್ಷ), ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ದಯಾನಂದ ಖಜೂರಿ, ಹರಿಶ್ಚಂದ್ರ ಕರಣಿಕ, ದೇವಿಂದ್ರ ಕರದಳ್ಳಿ, ಸಿದ್ಧಯ್ಯ ಶಾಸ್ತ್ರಿ ನಂದೂರಮಠ, ಜಗನ್ನಾಥ ಹಂದರ್ಕಿ, ಸಂತೋಷ ಕೋಮಟೆ, ವಿಕ್ರಮ್ ನಿಂಬರ್ಗಾ, ರವಿ ಮುತ್ತಗಿ, ರಾಯಪ್ಪ ಕೊಟಗಾರ, ಗುರುಪ್ರಸಾದ ಕರಕನವರ, ಅಲ್ಲಾಭಕ್ಷ ಟೇಲರ್, ವಿಜಯಕುಮಾರ ಗಾಯಕವಾಡ, ಇತರರಿದ್ದರು.