×
Ad

ಕಲಬುರಗಿ | ವಿದ್ಯುತ್ ದರ ಪರಿಷ್ಕರಣೆ : ಕೆಇಆರ್‌ಸಿಯಿಂದ ನ.12ರಂದು ಸಾರ್ವಜನಿಕ ಅಭಿಪ್ರಾಯ ಸಭೆ

Update: 2025-11-04 22:07 IST

ಕಲಬುರಗಿ: ಜೆಸ್ಕಾಂ ಸಂಸ್ಥೆಯಿಂದ ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಇದೇ‌ ನ. 12 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಆಯೋಗದ ನ್ಯಾಯಾಲಯದ ಸಭಾಂಗಣದಲ್ಲಿ ಭೌತಿಕ ಮತ್ತು ಆನ್‍ಲೈನ್ ಎರಡು ವಿಧಾನದ ಮೂಲಕ ಸಾರ್ವಜನಿಕರ‌ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಯಲಿದೆ.

ನೀರಾವರಿ ಪಂಪ್ ಸೆಟ್‍ಗಳು, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕ ವರ್ಗಗಳಿಗೆ ಸಂಬಂಧಿಸಿದಂತೆ (ಜಕಾತಿ ಆದೇಶ-2025)ರ ಜಕಾತಿ ದರಗಳಲ್ಲಿ ಮಾರ್ಪಾಡು ಕೋರಿ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಸಲ್ಲಿಸಿದ ಪರಿಶೀಲನಾ ಅರ್ಜಿ (RP-08 of 2025) ಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಸಾರ್ವಜನಿಕ ವಿಚಾರಣೆಯನ್ನು ನಡೆಸಲಿದೆ.

ಆನ್‍ಲೈನ್ ಮೂಲಕ ಅಹವಾಲು ಸಭೆಯಲ್ಲಿ ಭಾಗವಹಿಸಲು ಇಚ್ಛಿಸುವರು ತಮ್ಮ ಹೆಸರು, ಇಮೇಲ್ ಐಡಿ ಮತ್ತು ದೂರವಾಣಿ ಸಂಖ್ಯೆಗಳನ್ನು ಆಯೋಗದ ಇ-ಮೇಲ್ ಐಡಿ asst.secykerc@gmail.com ಗೆ ಇದೇ ನ.10 ರಂದು ಅಥವಾ ಅದಕ್ಕೂ ಮೊದಲು ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯ ಒಳಗಡೆ ಕಳುಹಿಸುವ ಮೂಲಕ ಹೆಸರು ನೊಂದಾಯಿಸಬೇಕು.

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಗು.ವಿ.ಸ.ಕಂ.ನಿ) ವ್ಯಾಪ್ತಿಗೆ ಬರುವ ಆಸಕ್ತ ಪಾಲುದಾರರು/ ಸಾರ್ವಜನಿಕರು ವಿಚಾರಣೆಗೆ ಖುದ್ದಾಗಿ ಭಾಗವಹಿಸಲು ಇಚ್ಛಿಸುವರು ಕಲಬುರಗಿಯ ಜೆಸ್ಕಾಂ ನಿಗಮ ಕಚೇರಿಯ ನೆಲ ಮಹಡಿಯಲ್ಲಿ ವರ್ಚುವಲ್ ಸಭೆಯಲ್ಲಿ ಭಗಾವಹಿಸಲು ಅವಕಾಶ ಕಲ್ಪಿಸಿದ್ದು, ಇಲ್ಲಿ ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಜೆಸ್ಕಾಂ ಕಾರ್ಯಚರಣೆ‌ ವಿಭಾಗದ ಮುಖ್ಯ ಅಭಿಯಂತರರು (ವಿದ್ಯುತ್) ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News