ಕಲಬುರಗಿ | ದಂತ ರೋಗಿಗಳ ರೂಟ್ ಕ್ಯಾನಲ್ ಚಿಕಿತ್ಸೆಗೆ ಎಂಡೋಡಾಟಿಕ್ಸ್ ಉತ್ತಮ ಪರಿಹಾರ : ಡಾ. ಅನಿಲ್ ಕುಮಾರ್ ಪಟ್ಟಣ
ಕಲಬುರಗಿ : ದಂತ ಚಿಕಿತ್ಸೆಯಲ್ಲಿ ಇಂದು ಕ್ರಾಂತಿಕಾರಕ ಬದಲಾವಣೆಗಳಾಗಿದ್ದು, ನಿಖರ ಯಶಸ್ವಿ ಚಿಕಿತ್ಸೆಗೆ ರೂಟಿನ್ ಎಂಡೋಡಾಟಿಕ್ಸ ಸಹಕಾರಿಯಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ದಂತ ಮಹಾವಿದ್ಯಾಲಯ ಸಂಚಾಲಕರಾದಡಾ. ಅನಿಲ್ ಕುಮಾರ್ ಪಟ್ಟಣ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್.ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಂರಕ್ಷಣಾತ್ಮಕ ದಂತ ಚಿಕಿತ್ಸೆ ಮತ್ತು ಎಂಡೋಡಾಟಿಕ್ಸ ವಿಭಾಗದ ವತಿಯಿಂದ ನಡೆದ ಸಿಡಿಇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಂಡೋಡಾಟಿಕ್ಸ ವಿಭಾಗವು ಇಂದು ವಿಶೇಷ ತಂತ್ರಗಳಿಂದ ದಂತ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದಾಗಿದೆ. ಚಿಕಿತ್ಸೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಡೆಗಟ್ಟಿ ರೂಟ್ ಕ್ಯಾನಲ್ ಚಿಕಿತ್ಸೆ ವಿಫಲವಾಗಿದಂತೆ ಮುನ್ನೆಚ್ಚರಿಕೆ ನೀಡುತ್ತದೆ ಎಂದರು.
ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಶೈಲೇಂದ್ರ ಮಾಶಾಲ್ಕರ್ ಮಾತನಾಡಿ, ಹಂತ ಹಂತವಾಗಿ ರೂಟಿನ್ ಎಂಡೋಡಾಟಿಕ್ಸ ಚಿಕಿತ್ಸೆ ನೀಡಿದಾಗ ಅದರಿಂದ ದಂತ ರೋಗಿಗೆ ಅನೂಕೂಲವಾಗುವ ವಿಧಾನ ತಿಳಿಸಿದರು.
ನಂತರ ಎಂಡೋಡಾಟಿಕ್ಸ ನ ಸಮಸ್ಯೆ ಪರಿಹಾರಗಳ ಬಗ್ಗೆ ಪ್ಯಾನೆಲ್ ಚರ್ಚೆ ನಡೆಯಿತು. ಡಾ.ಶೈಲೇಂದ್ರ ಮಾಶಾಲ್ಕರ, ಡಾ.ಸುರಭಿ ರೈರಾಮ, ಡಾ.ಸುಪ್ರೀಯಾ ಪಾಟೀಲ್, ಡಾ.ಶ್ರೀಶೈಲ ಇಂಡಿ, ಡಾ.ಶರಣಪ್ರೀಯಾ ಭಾಗವಹಿಸಿದ್ದರು.
ವೇದಿಕೆಯ ಮೇಲೆ ಎಂಡೋಡಾಟಿಕ್ಸ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಸ್ನಾತಕೋತ್ತರ ಅಧ್ಯಯನ ನಿರ್ದೇಶಕರಾದ ಡಾ ರತ್ನಾಕರ್ ಪಿ, ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ವೀರೇಂದ್ರ ಪಾಟೀಲ್, ಡಾ ಸಂಗೀತಾ ಕುಲಕರ್ಣಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಜಯಶ್ರೀ ಮುದ್ದಾ ಸ್ವಾಗತಿಸಿದರು. ಡಾ.ಸುರಭಿ ವಂದಿಸಿದರು.