ಕಲಬುರಗಿ | ಕಳಪೆ ಬೀಜ ವಿತರಿಸಿದ ಕಂಪನಿ ವಿರುದ್ಧ ಕ್ರಮಕ್ಕೆ ರೈತರಿಂದ ಆಗ್ರಹ
Update: 2025-07-25 19:48 IST
ಕಲಬುರಗಿ: ಕಳಪೆ ಗುಣಮಟ್ಟದ ಬೀಜಗಳನ್ನು ವಿತರಿಸಿದ ಕಂಪೆನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಇಲ್ಲಿನ ಜಂಟಿ ಕೃಷಿ ಇಲಾಖೆಯ ಕಚೇರಿ ಎದುರು ಪ್ರತಿಭಟಿಸಿ ಆಗ್ರಹಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶದಿಂದ ಪಡೆದು ಜಿಲ್ಲೆಯ ರೈತರಿಗೆ ಕಳಪೆ ಗುಣಮಟ್ಟದ ಸಾರಸ್ 335 ಸೋಯಾ ಬೀಜಗಳನ್ನು ವಿತರಿಸಿದ ಕಂಪೆನಿಗಳ ವಿರುದ್ಧ ಕ್ರಮ ಕೈಗೊಂಡು, ಇದರಿಂದ ಹಾನಿಗೆ ಒಳಗಾದ ರೈತರಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಎಸ್.ಕೆಂಚೆ, ಶಿವಕುಮಾರ ಹೆರೂರು, ರೇವಣಸಿದ್ದಪ್ಪಾ ಅಪಚಂದ, ಮನೋಹರ್ ಗುರುಡೆ, ಮಲ್ಲಿಕಾರ್ಜುನ ಮಿಸೆ, ಬಸವರಾಜ ಹೊಳಕುಂದಿ, ಬಾಬುರಾವ, ವಿದ್ಯಾವತಿ, ಚಂದಮ್ಮ ಬುರುಡೆ, ಗಂಗಮ್ಮಾ ಜಿವುಣಗಿ, ಅನಿತಾ ಹರೆಕುರುಬುರು, ಸುರುತ ಹತ್ತರ್ಕಿ ಸೇರಿದಂತೆ ಮತ್ತಿತರರು ಇದ್ದರು.