×
Ad

ಕಲಬುರಗಿ | ಲಂಚ ಪಡೆಯುತ್ತಿದ್ದ ವೇಳೆ ದಾಳಿ : ಎಸಿಪಿ ಶರಣಬಸಪ್ಪ ಸುಬೇದಾ‌ರ್ ಸಹಿತ ಐವರು ಲೋಕಾಯುಕ್ತ ಬಲೆಗೆ

Update: 2025-08-29 20:29 IST

ಕಲಬುರಗಿ: ಪ್ರಕರಣವೊಂದರ ತನಿಖೆ ಮುಗಿಸುವ ಕಾರಣಕ್ಕಾಗಿ 40 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಹಣ ಪಡೆಯುತ್ತಿರುವಾಗಲೇ ನಗರ ಪೊಲೀಸ್ ಆಯುಕ್ತಾಲಯದ ದಕ್ಷಿಣ ಉಪ ವಿಭಾಗದ ಎಸಿಪಿ ಸೇರಿದಂತೆ ಐವರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.

ಇಲ್ಲಿನ ನಗರ ಪೊಲೀಸ್ ಆಯುಕ್ತಾಲಯದ ದಕ್ಷಿಣ ಉಪ ವಿಭಾಗದ ಎಸಿಪಿ ಆಗಿರುವ ಶರಣಬಸಪ್ಪ ಸುಬೇದಾ‌ರ್, ರೈಟರ್ ಚಂದ್ರಕಾಂತ್, ಕಾನ್‌ಸ್ಟೇಬಲ್  ರಾಘವೇಂದ್ರ ಸೇರಿ ಒಟ್ಟು ಐವರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಐವರು ಸಹ ಪ್ರಕರಣವೊಂದರ ತನಿಖೆ ಮುಗಿಸುವ ಸಂಬಂಧ ರೇವಣಸಿದ್ದಪ್ಪ ಎಂಬುವರ ಬಳಿ 40 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಎಸ್ಪಿ ಸಿದ್ಧರಾಜು ಅವರ ನೇತೃತ್ವದಲ್ಲಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News