×
Ad

ಕಲಬುರಗಿ | ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆ; ರಾಜ್ಯ ಸರಕಾರಕ್ಕೆ ಬೌದ್ಧ ಅನುಯಾಯಿಗಳಿಂದ ಅಭಿನಂದನೆ

Update: 2025-03-07 22:12 IST

ಕಲಬುರಗಿ : ಚಿತ್ತಾಪುರ ತಾಲೂಕಿನ ಐತಿಹಾಸಿಕ ಬೌದ್ಧ ಸ್ಮಾರಕ ಗಳ ಸ್ಥಳವಾದ ಸನ್ನತಿಯನ್ನು ಶುಕ್ರವಾರ ನಡೆದ ರಾಜ್ಯ ಬಜೆಟ್ ಮಂಡನೆಯಲ್ಲಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಘೋಷಣೆ ಮಾಡಿದ್ದರಿಂದ ನಗರದ ಜಗತ್ ವೃತ್ತದ ಸಮೀಪ ಬೌದ್ಧ ಅನುಯಾಯಿಗಳಿಂದ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಪ್ರಾಧಿಕಾರ ರಚನೆಗೆ ಕಾರಣಕರ್ತರಾದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಘೋಷಣೆಗಳನ್ನು ಕೂಗುವ ಮೂಲಕ ಅಭಿನಂದನೆ ಸಲ್ಲಿಸಿದರು.

ಕಲಬುರಗಿಯ ಸನ್ನತಿಯಿಂದ ಬೆಂಗಳೂರಿನ ವರೆಗೆ ಪಂಚಶೀಲ ಪಾದಯಾತ್ರೆ ಕೈಗೊಂಡು ಸರ್ಕಾರದ ಮೇಲೆ ಒತ್ತಡ ತರುವಲ್ಲಿ ನಿರಂತರವಾಗಿ ಶ್ರಮಿಸಿದ ಬೌದ್ಧ ಬಿಕ್ಕೂ ಪೂಜ್ಯ ಭಂತೆ ಭೋದಿದತ್ತ ಹಾಗೂ ಪೂಜ್ಯ ಭಂತೆ ವರಜ್ಯೋತಿ ರವರಿಗೂ ಹಾಗೂ ಪಂಚಶೀಲ ಪಾದಯಾತ್ರೆಯಲ್ಲಿ ಭಾಗವಹಿಸಿದ ಎಲ್ಲಾ ಬೌದ್ಧ ಅನುಯಾಯಿಗಳಿಗೂ ಕಲಬುರಗಿ ಬೌದ್ಧ ಅನುಯಾಯಿಗಳಿಂದ ಧನ್ಯವಾದ ಸಲ್ಲಿಸಲಾಯಿತು.

ಪೂಜ್ಯ ಭಂತೆ ಬಿಕ್ಕುಣಿ ಆರ್ಯಜೀ ಸುಮನ್, ಮುಖಂಡರಾದ ಡಾ.ವಿಠ್ಠಲ ದೊಡ್ಡಮನಿ, ವಿಶಾಲ ನವರಂಗ್, ದಿಗಂಬರ ಬೆಳಮಗಿ, ಎಸ್ ಎಸ್ ತವಡೆ,ದೇವೇಂದ್ರ ಸಿನ್ನೂರ, ಮಲ್ಲಪ್ಪ ಹೊಸಮನಿ, ಸುಭಾಷ ಕೋರೆ, ರಾಜೀವ ಜಾನೆ, ಅಶೋಕ ವೀರನಾಯಕ, ಪ್ರಕಾಶ ಕಪನೂರ, ದಿನೇಶ ದೊಡ್ಡಮನಿ, ಪ್ರಕಾಶ ಮೂಲಭಾರತಿ, ಗುಂಡಪ್ಪ ಲಂಡನಕರ್, ಜಗದೇವಪ್ಪ ಅಂಕಲಗಿ, ನಾಗೇಂದ್ರ ಜವಳಿ, ಭೀಮಾಶಾ ಧರಿ, ವಿಜಯಕುಮಾರ ಲೆಗಂಟಿ, ಶರಣು ದೊಡ್ಡಮನಿ, ಸಂದೀಪ ಮಾಳಗೆ, ಕಿಶೋರ ಗಾಯಕವಾಡ, ಧರ್ಮಣ್ಣ ಜೈನಪುರ, ಜೈಭೀಮ ಲೆಗಂಟಿ, ಅಶ್ವಿನ ಸಂಕಾ, ಮಸ್ತನ ದಂಡೆ, ರಮೇಶ ರಾಗಿ, ರಾಜೇಶ ಗೋಳಾ, ರಾಜು ಕೊರಳ್ಳಿ, ಸುನಿಲ ಮನ್ಪಡೆ,ಸಂತೋಷ ಗಟ್ಟು, ಮಹದೇವ ಬಬಲಾದ, ಪ್ರಕಾಶ ನಾಗನಳ್ಳಿ, ಅಮರ ಶಿರವಾಳ, ಮಂಜು ಸಿ ಕೆ, ಪೃತ್ವಿರಾಜ ಎನ್.ಗುಂಡಗುರ್ತಿ ಸೇರಿದಂತೆ ಅನೇಕರು ನಗರದ ಜಗತ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News