ಕಲಬುರಗಿ: ಫ್ಯೂಷನ್ ಇನ್‌ಸ್ಟಿಟ್ಯೂಟ್ ಆಫ್ ಲರ್ನಿಂಗ್ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ವಿವಿಧ ವೈದ್ಯಕೀಯ ಮತ್ತು ತಾಂತ್ರಿಕ ವಿಭಾಗಗಳಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಭಾನುವಾರ ನಗರದ ಹೊಸ ವೆಂಕಟಗಿರಿ ಹೋಟೆಲ್ ಸಮೀಪದ ಸಿದ್ದೇಶ್ವರ ಫಂಕ್ಷನ್ ಹಾಲ್‌ನಲ್ಲಿ ನಡೆಯಿತು.

ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಶೇಖರ ವಿಶ್ವಾರಾಧ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮವನ್ನು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಉದ್ಘಾಟಿಸಿದರು. ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಸ್ಮರಣ ಸಂಚಿಕೆ ಹಾಗೂ ಅಧ್ಯಯನ ಸಾಮಗ್ರಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಡಾ. ಮಹದೇವಪ್ಪ ನಾಗರಹಳ್ಳಿ, ಕೆಬಿಎನ್ ಕಾಲೇಜಿನ ಪ್ರಾಧ್ಯಾಪಕ ಡಾ. ಸಿದ್ದೇಶ್, ಹಿರಿಯ ತಜ್ಞೆ ಡಾ. ಶೋಭಾ ಪಾಟೀಲ, ಡಾ. ಪರಮೇಶ್ವರಿ ಬಿಜಾಪುರ, ಡಾ. ನಾಗರಾಜ ಬಿಜಾಪುರ, ಡಾ. ಬಸವರಾಜ ಪಾಟೀಲ ಗೌಡ, ನಿಜಗುಣಗೌಡ ಯಲಗೋಡ, ಕಿರಣ್ ಕಮಲಾಪುರ, ಸಂಗಣ್ಣಗೌಡ ಇನಾಮದಾರ, ಆಕಾಶ ಮತ್ತಿಮಡು, ಫ್ಯೂಷನ್ ಇನ್‌ಸ್ಟಿಟ್ಯೂಟ್ ಆಫ್ ಲರ್ನಿಂಗ್ ಸಂಸ್ಥೆಯ ಅಧ್ಯಕ್ಷೆ ಕೌಶಲ್ಯ ಎಂ.ಎಸ್. ಹಾಗೂ ನಿರ್ದೇಶಕ ಮಹೇಶಕುಮಾರ ಕೆ. ಸೂಗೂರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಬಿಡಿಎಸ್ ವಿಭಾಗದಲ್ಲಿ ಚನ್ನಬಸವ, ಮೇಘಾ, ಶ್ರೀನಿಧಿ, ವೈಷ್ಣವಿ ರಾಜಪೂತ್ ಹಾಗೂ ಪ್ರಮೋದ್ ಮಹದೇವಪ್ಪ ಅವರನ್ನು ಸನ್ಮಾನಿಸಲಾಯಿತು. ಪಶುವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಶ್ರೀಶೈಲ ಬಿರಾದಾರ ಅವರಿಗೆ ಗೌರವ ಸಲ್ಲಿಸಲಾಯಿತು.

ಬಿಎಎಂಎಸ್ ವಿಭಾಗದಲ್ಲಿ ಸ್ಪೂರ್ತಿ ರೆಡ್ಡಿ, ಭಾಗ್ಯಶ್ರೀ, ಸಾಕ್ಷಿ, ರೇಣುಕಾ, ಸೌಜನ್ಯ ಮಾನಳ್ಳಿ, ಅಂಜುಂ ಪಟೇಲ್, ಕಾವೇರಿ ಪಾಟೀಲ, ಶ್ರೇಯಾ ಪಾಟೀಲ, ನಿಶಾ, ಶ್ರೀಲಕ್ಷ್ಮಿ ಅಕ್ಕೋಣಿ ಹಾಗೂ ಸೃಷ್ಟಿ ಮಠ ಅವರನ್ನು ಸನ್ಮಾನಿಸಲಾಯಿತು.

ಎಂಜಿನಿಯರಿಂಗ್ ವಿಭಾಗದಲ್ಲಿ ವಿಪುಲ್ ರೆಡ್ಡಿ, ಸಮೃದ್ಧಿ, ಶ್ವೇತಾ ಪಾಟೀಲ, ಸ್ವರೂಪ ರಾಣಿ, ಭಾವನಾ ಮುಳಗೆ, ರಾಕೇಶ್ ರೆಡ್ಡಿ, ವೇದಾಂತ ನವಲ್, ಸ್ವಾತಿ, ಸ್ನೇಹಾ ಹಾಗೂ ಸೃಷ್ಟಿ ಗುತ್ತೇದಾರ ಅವರನ್ನು ಗೌರವಿಸಲಾಯಿತು.

ವೈದ್ಯಕೀಯ, ದಂತ ವೈದ್ಯಕೀಯ, ಪಶುವೈದ್ಯಕೀಯ, ಆಯುರ್ವೇದ ಹಾಗೂ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣದತ್ತ ಹೆಜ್ಜೆ ಇಟ್ಟಿರುವ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾರಂಭದ ಉದ್ದೇಶವಾಗಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಪ್ರತಿಭೆ ಹಾಗೂ ಪರಿಶ್ರಮವನ್ನು ಗುರುತಿಸಿ, ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಸಂಸ್ಥೆಯು ವಾರ್ಷಿಕೋತ್ಸವ ಆಯೋಜಿಸಿತ್ತು. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor