ಕಲಬುರಗಿ | ಗುಲ್ಬರ್ಗಾ ವಿವಿಯ ಕುಲಪತಿ, ಕುಲಸಚಿವರಿಗೆ ಸನ್ಮಾನ
Update: 2025-09-10 21:41 IST
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ನೇಮಕವಾದ ಪ್ರೊ.ಶಶಿಕಾಂತ ಉಡಿಕೇರಿ ಹಾಗೂ ಕುಲಸಚಿವರಾದ ಡಾ.ರಮೇಶ್ ಲಂಡನಕರ್ ಅವರಿಗೆ ಎನ್ಎಸ್‌ಯುಐ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಎನ್ಎಸ್‌ಯುಐ ಸಂಘಟನೆಯ ಜಿಲ್ಲಾಧ್ಯಕ್ಷರಾದ ಡಾ.ಗೌತಮ್ ಕರಿಕಲ್ ಅವರ ನೇತೃತ್ವದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ರಾಜು ಕಗ್ಗನಮಡಿ, ಎನ್ಎಸ್‌ಯುಐ ಉಪಾಧ್ಯಕ್ಷರಾದ ಸಂಪೂರ್ಣ ಪಾಟೀಲ್, ಎನ್ಎಸ್‌ಯುಐ ಪದಾಧಿಕಾರಿಗಳು, ಗುಲ್ಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವಸತಿ ನಿಲಯದ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.