ಕಲಬುರಗಿ | ಭೂ ನ್ಯಾಯಮಂಡಳಿಯ ಅಧಿಕಾರೇತರ ಸದಸ್ಯರಿಗೆ ಸನ್ಮಾನ
Update: 2025-06-27 20:59 IST
ಕಲಬುರಗಿ : ತಾಲ್ಲೂಕು ಭೂ ನ್ಯಾಯಮಂಡಳಿಯ ಅಧ್ಯಕ್ಷರಾಗಿ ವಿಭಾಗದ ಸಹಾಯಕ ಆಯುಕ್ತರು, ಅಧಿಕಾರೇತರ ಸದಸ್ಯರಾಗಿ ಕೌವಲಗಾ (ಬಿ)ಯ ವಾಹಿದ್ ಸಾಬ್, ಬಾಪು ನಗರದ ನ್ಯಾಯವಾದಿ ಅನಿಲಕುಮಾರ ಕಾಂಬಳೆ, ವಿದ್ಯಾನಗರದ ಚನ್ನಪ್ಪ ಮರಬ, ಕುಸನೂರದ ಶಿವಪುತ್ರ ಮತ್ತು ಸದಸ್ಯ ಕಾರ್ಯದರ್ಶಿಯಾಗಿ ಕಲಬುರಗಿ ತಾಲ್ಲೂಕ ತಹಶೀಲ್ದಾರ್ ಅವರನ್ನು ನಾಮನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸನ್ಮಾನಿಸಿ ಗೌರವಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭೂ ನ್ಯಾಯಮಂಡಳಿ ಸಧೃಡಗೊಳಿಸಲು ನಿರ್ಧರಿಸಲಾಯಿತು. ಈ ಹಿನ್ನಲೆ ನಾಲ್ವರನ್ನು ನೇಮಕ ಮಾಡಿ ಅಧಿಕಾರ ವಹಿಸಲಾಗಿದೆ ಎಂದು ಶಾಸಕ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಕೆ.ಆನಂದ ಶೀಲ್, ಮಂಜುನಾಥ ಬಿರಾದಾರ್, ವೆಣಕಟೇಶ ಭಜಂತ್ರಿ, ಸುಭಾಷ್ ಡೆಂಕಿ, ಶಂಭುಲಿಂಗ ಪಾಟೀಲ್, ಆನಂದ ಸಿದ್ರಾಮಪ್ಪ, ಶಾಂತು ಪಾಟೀಲ್, ಅಶೋಕ ಹರವಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.