ಕಲಬುರಗಿ | ಮಳೆಯಿಂದ ಮನೆಗೆ ಹಾನಿ
Update: 2025-05-19 18:39 IST
ಕಲಬುರಗಿ : ರವಿವಾರ ಮಧ್ಯರಾತ್ರಿ ಸುರಿದ ಮಳೆಯಿಂದಾಗಿ ಮನೆ ಕುಸಿದಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಲಿಂಗಾನಗರ ತಾಂಡಾದಲ್ಲಿ ನಡೆದಿದೆ.
ಅನುಷಾಬಾಯಿ ಮೋಹನ್ ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು, ಮನೆಯಲ್ಲಿನ ಅಪಾರ ವಸ್ತುಗಳು ಜಖಂಗೊಂಡಿವೆ. ಕಳದೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ ಕುಸಿದುಬಿದ್ದಿದೆ.
ಮನೆ ಕಳೆದುಕೊಂಡ ಮಹಿಳೆ ಅನುಷಾಬಾಯಿ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದು, ಕೂಡಲೇ ಪರಿಹಾರ ಘೋಷಿಸಬೇಕೆಂದು ನೆರೆಯ ನಿವಾಸಿಗಳು ಚಿಂಚೋಳಿ ತಹಶೀಲ್ದಾರ್ ಅವರಿಗೆ ಒತ್ತಾಯಿಸಿದ್ದಾರೆ.