×
Ad

ಕಲಬುರಗಿ | ಮಳೆಯಿಂದಾಗಿ ಮನೆಗೆ ಹಾನಿ : ಪರಿಹಾರಕ್ಕೆ ಲಿಂಬಾಜಿ ಚವಾಣ್ ಆಗ್ರಹ

Update: 2025-05-19 21:26 IST

ಕಲಬುರಗಿ : ಚಿಂಚೋಳಿ ತಾಲ್ಲೂಕಿನ ವೆಂಕಟಾಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಲಿಂಗಾನಗರ ತಾಂಡಾದಲ್ಲಿ ಮನೆ ಕುಸಿದು ಅಪಾರ ಹಾನಿಯಾಗಿದ್ದು,  ಕೂಡಲೇ ಪರಿಹಾರ ಘೋಷಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ಚಿಂಚೋಳಿ ಘಟಕದ ಅಧ್ಯಕ್ಷ ಲಿಂಬಾಜಿ ಚವಾಣ್ ಆಗ್ರಹಿಸಿದ್ದಾರೆ.

ರವಿವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಲಿಂಗಾನಗರ ತಾಂಡಾದ ಅನುಷಾ ಬಾಯಿ ಮೋಹನ್ ಎಂಬುವವರಿಗೆ ಸೇರಿದ ಮನೆ ಸಂಪೂರ್ಣವಾಗಿ ಕುಸಿದಿದೆ. ಈ ಘಟನೆಯಿಂದಾಗಿ ಕುಟುಂಬದವರಿಗೆ ದಿಕ್ಕು ತೋಚದಂತಾಗಿದ್ದು, ಕೂಡಲೇ ಸಂತ್ರಸ್ತರ ನೆರವಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಲಿಂಬಾಜೀ, ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ,

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News