ಕಲಬುರಗಿ | ಮನೆ ಬೀಗ ಮುರಿದು ಕಳ್ಳತನ : ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
Update: 2025-05-28 16:28 IST
ಕಲಬುರಗಿ : ಮನೆ ಬಿಗ ಮುರಿದು ಎರಡು ಮನೆಯಲ್ಲಿ ಕಳ್ಳತನ ನಡೆದಿರುವವ ಪ್ರಕರಣ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದಲ್ಲಿ ನಡೆದಿದೆ.
ದೇವಲಗಾಣಗಾಪುರದ ಭೀಮರಾಯಗೌಡ , ರಜಿಯಾಬೇಗಂ ದಸ್ತಗೀರ್ ಎಂಬುವವರ ಮನೆ ಕಳ್ಳತನವಾಗಿದ್ದು, ಭೀಮರಾಯಗೌಡ ಮನೆಯಲ್ಲಿ 110 ಗ್ರಾಂನ ಲಕ್ಷ್ಮೀ ದೇವಿಯ ಬೆಳ್ಳಿ ಮೂರ್ತಿ ಚಿನ್ನ ಹಾಗೂ ನಗದು ಕಳ್ಳತನವಾಗಿದೆ. ರಜಿಯಾಬೇಗಂ ಮನೆಯಲ್ಲಿ 10 ಗ್ರಾಂ ಚಿನ್ನ, 30 ಗ್ರಾಂ ಬೆಳ್ಳಿ ಹಾಗೂ ನಗದು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಕಳ್ಳತನ ಮಾಡುವ ವೀಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.