ಕಲಬುರಗಿ | ಚಿಂಚೋಳಿಯಲ್ಲಿ ಹೆಚ್ಚಿದ ಕಾಡು ಹಂದಿಗಳ ಹಾವಳಿ; ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ
ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಶಾದಿಪುರ ಗ್ರಾಮದ ಜಮೀನುಗಳಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ಕಾಡು ಹಂದಿಗಳು ನಾಶಪಡಿಸಿದ್ದು, ಸ್ಥಳಕ್ಕೆ ಜಿಲ್ಲೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿಯ ಡಿ.ಎಫ್.ಓ. ಸುಮಿತ್, ಚಿಂಚೋಳಿಯ ಆರ್.ಎಫ್.ಓ ಸಂಜು ಚವ್ಹಾಣ್ ಸೇರಿದಂತೆ ಇತರ ಅಧಿಕಾರಿಗಳು ಶಾದಿಪುರ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿದ್ದಾರೆ.
ಶಾದಿಪುರ ಗ್ರಾಮದಲ್ಲಿ ಸುಮಾರು 120 ಎಕರೆ ಪ್ರದೇಶದಲ್ಲಿ ಬೆಳೆದಿರುವ ಕಬ್ಬು ಬೆಳೆಯನ್ನು ಕಾಡು ಹಂದಿಗಳು ನಾಶಪಡಿಸಿವೆ. ಈ ಹಾವಳಿಯಿಂದಾಗಿ ಬಡ ರೈತರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಈ ಕುರಿತು ಸರಕಾರ ಕೂಡಲೇ ಪರಿಹಾರ ಘೋಷಿಸಬೇಕೆಂದು ವಿವಿಧ ಸಂಘಟನೆ, ರೈತರು ಆಗ್ರಹಿಸಿದ್ದರು.
ಸ್ಥಳೀಯರ ಮನವಿ ಮೇರೆಗೆ ಜಿಲ್ಲೆಯ ಹಲವು ಅರಣ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಹಾರ ಒದಗಿಸುವಲ್ಲಿ ಶ್ರಮಿಸುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ಚಿಂಚೋಳಿ ತಾಲ್ಲೂಕು ಅಧ್ಯಕ್ಷ ಲಿಂಬಾಜಿ ಚವ್ಹಾಣ್, ಬಸವರಾಜ್ ಬಾಗೋಡಿ, ರಾಮ್ದುಚಂದ್ರಪ್ಪ, ರಾಮಚಂದ್ರ ಕಾರ್ಬಾರಿ, ಖುಬಸಿಂಗ್ ಸಿ ರಾಠೋಡ್, ದಶರಥ ಕಾವಲ್, ಪತ್ತಿನಾರಾಯಣ, ಜಿತೂ ರಾಠೋಡ್, ಪಾಂಡು ಪವಾರ್, ವೀರಪ್ಪ ತಳವಾರ್, ವಸಂತ್ ಸಿ ರಾಠೋಡ್, ಶರಣಪ್ಪ ಬಗರಿ, ರವಿ ಚವಾಣ್, ಪ್ರೇಮ್ ರಾಠೋಡ್, ರಮೇಶ್ ಪವಾರ್, ರಮೇಶ್ ಚವ್ಹಾಣ್, ತಪ್ಸಿರಾಮ್ ರಾಠೋಡ್ ಸೇರಿದಂತೆ ಮತ್ತಿತರರು ಇದ್ದರು.