×
Ad

ಕಲಬುರಗಿ | ಭಾರತೀಯ ಯುವ ಸೈನ್ಯದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ

Update: 2025-03-27 19:37 IST

ಕಲಬುರಗಿ : ಬೇಸಿಗೆ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಾರತೀಯ ಯುವ ಸೈನ್ಯ ವತಿಯಿಂದ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಯಿತು.

ಭಾರತೀಯ ಯುವ ಸೈನ್ಯದ ರಾಷ್ಟ್ರೀಯ ಅಧ್ಯಕ್ಷರಾದ ರಾಜು ಸುರಪುರ ಅವರ ನೇತೃತ್ವದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಶ್ರೀಧರ ರತ್ನಗಿರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಅರವಿಂದ ನಾಯಕ, ರವಿಚಂದ್ರ ಗುತ್ತೇದಾರ್, ಡಾ.ಕಿರಣ ಜಾರ್ಜ್, ಡಾ.ರವೀಂದ್ರ ಪಾಟೀಲ್, ಕರಣ ಸುಬೇದಾರ್, ಜೊತೆಗಿದ್ದರು.

ಈ ಸಂದರ್ಭದಲ್ಲಿ ಸೈನ್ಯದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಚಿಂಚನಸೂರ, ಮಾಲಾಶ್ರೀ ಮೇಡಂ, ಜಯಶ್ರೀ, ಗಣೇಶ್ ಕಟ್ಟಿಮನಿ, ಗೌತಮ್ ಹದನೂರು, ರೋಮಿಯೋ, ಬಾಗೇಶ್ ಮರ್ತೂರ್, ದಿನೇಶ್ ವಗನ್, ಪ್ರವೀಣ ದೊಡ್ಡಮನಿ, ದೊಡ್ಡಮನಿ, ರೋಹಿತ್ ಚೌಹಾನ್, ಪ್ರವೀಣ್ ಪುಣೆ, ಅವಿನಾಶ್ ತಡಕಲ್, ಅಮಿತ ಸೇರಿದಂತೆ ಅನೇಕ ಕಾರ್ಯಕರ್ತರು, ಯುವಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News