×
Ad

ಕಲಬುರಗಿ | ಬೆಳೆ ವಿಮೆ ಕುರಿತು ರೈತರಲ್ಲಿ ಅರಿವು ಮೂಡಿಸುವುದು ಅಧಿಕಾರಿಗಳ ಕರ್ತವ್ಯ : ಡಿಸಿ ಫೌಝಿಯಾ ತರನ್ನುಮ್

Update: 2025-07-18 20:59 IST

ಕಲಬುರಗಿ: ಮಳೆಗಾಲ ಪ್ರಾರಂಭವಾಗಿದ್ದರಿಂದ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದು, ಭವಿಷ್ಯದಲ್ಲಿ ಪ್ರಕೃತಿ ವಿಪತ್ತಿನಿಂದ ತಲೆದೂರಬಹುದಾದ ಸಮಸ್ಯೆಗಳನ್ನು ಹಾಗೂ ಬೆಳೆ ವಿಮೆಯ ಅವಶ್ಯಕತೆಯನ್ನು ರೈತರಿಗೆ ಮನದಟ್ಟು ಮಾಡುವ ಮೂಲಕ ಬೆಳೆ ಸಾಲಗಳಿಗೆ ವಿಮೆ ಮಾಡಿಸಲು ರೈತರಲ್ಲಿ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಳೆ ಸಾಲ ನೀಡುವ ಬ್ಯಾಂಕ್ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‍ಗಳಿಂದ 3 ಲಕ್ಷ ರೈತರಿಗೆ ಒಟ್ಟು 3,800 ಕೋಟಿ ರೂ. ಬೆಳೆ ಸಾಲವನ್ನು ನೀಡಲಾಗಿದ್ದು, ಅವರಿಗೆ ಬೆಳೆ ವಿಮೆ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಬ್ಬ ಬ್ಯಾಂಕ್ ಅಧಿಕಾರಿಯ ಕರ್ತವ್ಯ ಆಗಿರುತ್ತದೆ ಎಂದರು.

ಬೆಳೆ ವಿಮೆ ಕಂತು ಅತ್ಯಂತ ಚಿಕ್ಕ ಮೊತ್ತವಾಗಿದ್ದು, ಅದನ್ನು ತುಂಬುವುದರಿಂದ ಭವಿಷ್ಯದಲ್ಲಿ ತಲೆದೂರಬಹುದಾದ ಸಮಸ್ಯೆಗಳಿಗೆ ಸಹಾಯಕವಾಗಲಿದೆ. ಜುಲೈ 31 ರೊಳಗೆ ಜಿಲ್ಲೆಯ ಬೆಳೆ ವಿಮೆ ಸಾಲ ಪಡೆದಿರುವ 3 ಲಕ್ಷ ರೈತರಿಗೆ ಮನವೊಲಿಸುವ ಮೂಲಕ ಬೆಳೆ ವಿಮೆಯಲ್ಲಿ ಶೇ.100 ರ ರಷ್ಟು ಗುರಿ ಸಾಧಿಸಬೇಕು. ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ತಾಲ್ಲೂಕುವಾರು ಮುಖ್ಯ ಬೆಳೆಗಳ ಮತ್ತು ಇತರೆ ಬೆಳೆಗಳನ್ನು ಮತ್ತು ರೈತರು ಮಾಡಿರುವ ಬೆಳೆ ಸಾಲವನ್ನು ವಿಂಗಡಿಸಿ ಪ್ರತಿ ರೈತರನ್ನು ತಲುಪಲು ಅಗತ್ಯ ವ್ಯವಸ್ಥೆ ಮಾಡಿಕೊಂಡು ಮನವೊಲಿಸುವ ಕಾರ್ಯ ಮಾಡದಿದ್ದರೆ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿವಿಧ ಮಾಧ್ಯಮಗಳ ಮೂಲಕ ರೈತರಲ್ಲಿ ಬೆಳೆವಿಮೆ ಮಾಡಿಸುವ ಕುರಿತಂತೆ ಜಾಗೃತಿ ಮೂಡಿಸಲು ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಸಭೆಯಲ್ಲಿ ಕಲಬುರಗಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ವಿವಿಧ ಬ್ಯಾಂಕ್‍ಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News