ಕಲಬುರಗಿ | ನ.3 ರಂದು ಐಟಿಐ ಕಾಲೇಜು ಹಿಂದುಗಡೆ ಉದ್ಯೋಗ ಮೇಳ
ಕಲಬುರಗಿ : ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ 2025ರ ನ. 3 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಟಾಟಾ ಪವರ್ ರಿನ್ಯುವೆಬಲ ಏನರ್ಜಿಯಲ್ಲಿ ಕಂಪನಿ ಟ್ರೈನಿ ಹುದ್ದೆಗೆ ಡಿಪ್ಲೋಮಾ (ಬಿ.ಎ., ಬಿ.ಕಾಮ್, ಬಿ.ಎಸ್ಸಿ, ಬಿಸಿಎ, ಬಿಬಿಎ) ಯಾವುದೇ ಪದವಿ ಪಾಸಾಗಿರಬೇಕು. ಅಪ್ರೆಂಟಿಶಿಪ್ ಟ್ರೈನಿಂಗ್‍ಗೆ ಐಟಿಐ (ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್) (ಎ/ಎಮ್), ಎಲೆಕ್ಟಿಷಿಯನ್ ಮತ್ತು ಫಿಟ್ಟರ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 24 ವರ್ಷದೊಳಗಿರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡಟಾ) ಭಾವಚಿತ್ರಗಳು ಹಾಗೂ ಆಧಾರ್‍ಕಾರ್ಡ್‍ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846 ಅಥವಾ ಮೊಬೈಲ್ ಸಂಖ್ಯೆ 9900872002ಗೆ ಸಂಪರ್ಕಿಸಲು ಕೋರಲಾಗಿದೆ.