×
Ad

ಕಲಬುರಗಿ | ನ.1ರಂದು ಜೈ ಕನ್ನಡಿಗರ ಸೇನೆ ವತಿಯಿಂದ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ ಪ್ರದಾನ : ದತ್ತು ಭಾಸಗಿ

Update: 2025-10-30 21:26 IST

ಕಲಬುರಗಿ : 70ನೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಜೈ ಕನ್ನಡಿಗರ ಸೇನೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದತ್ತು ಭಾಸಗಿ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.1ರಂದು ಸಂಜೆ 5ಗಂಟೆಗೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆಯಲಿರುವ ಈ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವನ್ನು ಡಾ.ದಾಕ್ಷಾಯಣಿ ಎಸ್.ಅವ್ವಾಜಿ ಹಾಗೂ ಷಡಕ್ಷರಿ ಬಸವರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮವನ್ನು ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ.ಅಜಯಸಿಂಗ್ ಅವರು ಉದ್ಘಾಟಿಸುವರು, ಕನ್ನಡಾಂಬೆಯ ಭಾವಚಿತ್ರಕ್ಕೆ ಮಹಾಪೌರರಾದ ವರ್ಷಾ ಜಾನೆ ಅವರು ಮಾಲಾರ್ಪಣೆ ಮಾಡುವರು. ಸಮಾರಂಭದಲ್ಲಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್‌, ಕನೀಜ್ ಫಾತೀಮಾ, ಬಸವರಾಜ ಮತ್ತಮಡು, ಡಾ.ಅವಿನಾಶ್‌ ಜಾಧವ, ಶಶೀಲ ನಮೋಶಿ, ಜಗದೇವ ಗುತ್ತೇದಾರ, ಅರುಣಕುಮಾರ ಎಂ.ವೈ. ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಚಂದು ಪಾಟೀಲ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ.ಫಾರುಕ್ ಅಹ್ಮದ ಮಣ್ಣೂರ್, ಡಾ.ಶರಣಬಸಪ್ಪ ಕಾಮರೆಡ್ಡಿ, ಡಾ.ವಿಕ್ರಮ ಸಿದ್ದಾರೆಡ್ಡಿ, ಡಾ.ಸಲ್ಮಾನ ವಟೇಲ್, ಕೈಲಾಸ್ ಬನಾಳೆ, ಡಾ.ಮಂಜುನಾಥ ಧೋಶೆಟ್ಟಿ, ಮಂಜುನಾಥ ಕಂಬಾಳಿಮಠ, ಪ್ರಶಾಂತ ಮಾಲಿ, ಎಂ.ವಿ.ಸಿದ್ದಿಕಿ, ನಾಜ್ ಜಾಹೀರಾತು, ಡಾ.ಸುರೇಶ ಎಲ್.ಶರ್ಮಾ, ಅಶೋಕ ಎಂ.ಕಾಳೆ, ಡಾ.ಲಿಂಗರಾಜ ಅಪ್ಪ, ಭವಾನಿಸಿಂಗ್ ಠಾಕೂರ , ಭೀಮರಾಯ ಎಂ., ಡಾ.ಅಸ್ಲಂ ಚೌಂಗೆ, ಡಾ.ಆನಂದ ನಾಯಕ, ಸೈಯ್ಯದ್ ರೌಫ್ ಖಾದ್ರಿ, ನಜೀರಮಿಯಾ ಹಟ್ಟಿ, ಮಹಾದೇವಿ ಉಪ್ಪಿನ್ ಸೇರಿದಂತೆ ಹಲವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News