ಕಲಬುರಗಿ | ಕಾಂಗ್ರೆಸ್ ಸರಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ
ಕಲಬುರಗಿ : ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಜನ ವಿರೋಧಿನೀತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, 5(ಐದು) ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾದ ಬಾಲರಾಜ್ ಅಶೋಕ ಗುತ್ತೇದಾರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಿಮ್ಮಾಪೂರ ವೃತದಿಂತ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಿಲ್ಲಾ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ್, ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ್ ಬೀರಬಿಟ್ಟೆ, ಕಾರ್ಯಧ್ಯಕ್ಷರುಗಳಾದ ಶಾಮರಾವ್ ಸುರನ್, ರಾಮಚಂದ್ರ ಅಟ್ಟೂರ್, ಯುವ ಅಧ್ಯಕ್ಷ ಪ್ರವೀಣ್ ಜಾಧವ, ಕೃಷ್ಣ ರೆಡ್ಡಿ, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಸಂಗಣಿ, , ಸುನಿಲ್ ಗಜರೆ, ಸಿದ್ರಾಮಪ್ಪ ಹೋದಲೂರ್, ಬೈಲಪ್ಪ ಪತ್ತೇದಾರ ಮಂಜುಗೌಡ ಪಾಟೀಲ್, ವಿಠ್ಠಲ್ ಜಾಧವ, ದೇವಿಂದ್ರಾ ಹಸನಪುರ ನಾಮದೇವ್ ಕಾಂಬಳೆ, ಶಿವರಾಮ್ ರೆಡ್ಡಿ, ಜಗನ್ನಾಥ ರೆಡ್ಡಿ, ಹಣಮಂತ ಕಂದಳ್ಳಿ, ರಾಘವೇಂದ್ರ ಗುತ್ತೇದಾರ, ಯೇಸುನಾಥ್, ಮಹಿಳಾ ಮುಖಂಡರಾದ ಮಹೇಶ್ವರಿ ವಾಲೆ, ಮಹನಂದ ಪಡಶೆಟ್ಟಿ, ಸುನೀತಾ ಕೋರವಾರ, ಅನುರಾಧ ಹಾಸನ, ಸುನೀತಾ ತಳವಾರ, ಗೀತಾ ಸೇಡಂ, ಅನ್ನಪೂರ್ಣ ಕುಲಕರ್ಣಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ರೈತರು ಉಪಸ್ಥಿತರಿದ್ದರು.