×
Ad

ಕಲಬುರಗಿ | ರಾಕೇಶ ವಿರುದ್ದ ಕಠಿಣ ಕ್ರಮಕ್ಕೆ ಜೇವರ್ಗಿ ನ್ಯಾಯವಾದಿಗಳ ಸಂಘ ಆಗ್ರಹ

Update: 2025-10-10 18:56 IST

ಕಲಬುರಗಿ : ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಕೋರ್ಟ್ ಹಾಲ್‍ನಲ್ಲಿ ವಕೀಲ ರಾಕೇಶ ಕಿಶೋರ್ ಎಂಬುವನು ಶೂ ಎಸೆಯಲು ಪ್ರಯತ್ನಿಸಿದ್ದು ಖಂಡನಿಯವಾದದ್ದು. ಈ ದೇಶ ದ್ರೋಹಿಯ ವಿರುದ್ದ ಸೂಕ್ತ ಕ್ರಮ ಕೈಗಳ್ಳಬೇಕು ಎಂದು ವಕೀಲರ ಸಂಘದ ಕಾರ್ಯದರ್ಶಿ ರಾಜಶೇಖರ ಶಿಲ್ಪಿ ಆಗ್ರಹಿಸಿದರು.

ಘಟನೆ ವಿರೋಧಿಸಿ ಬುಧವಾರ ನ್ಯಾಯವಾದಿಗಳ ಸಂಘದಿಂದ ಜೇವರ್ಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೆಶಿಸಿ ವಕೀಲರ ಸಂಘದ ಕಾರ್ಯದರ್ಶಿ ರಾಜಶೇಖರ ಶಿಲ್ಪಿ ಮಾತನಾಡಿ, ಈ ಘಟನೆಯಿಂದ ಇಡೀ ದೇಶದ ಜನರ ಮನಸ್ಸಿಗೆ ಘಾಸಿಯಾಗಿದೆ. ರಾಕೇಶ ಕಿಶೋರ್ ಅನ್ನುವ ಸನಾತನವಾದಿ ಜಸ್ಟಿಸ್ ಗವಾಯಿ ಅವರಿಗೆ ಮಾತ್ರ ಅವಮಾನ ಮಾಡಿಲ್ಲ. ಈ ದೇಶದ ನ್ಯಾಯಾಂಗ ವ್ಯವಸ್ಥೆ, ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಅವರನ್ನು ದೇಶ ದ್ರೋಹಿ ಎಂದು ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ಅವರನ್ನು ಬಾರ್ ಕೌನ್ಸಿಲ್‍ನಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶಾಂತಗೌಡ ನರಿಬೋಳ, ಬಾಷಾ ಪಟೇಲ್‌, ರಾಮನಾಥ ಭಂಡಾರಿ, ಶಿವಾನಂದ ಕುಂಟೋಜಿಮಠ, ಬೆಣ್ಣೆಪ್ಪ ಕೊಂಬಿನ್, ಸಂತೋಷ ಅಲೂರ, ಖಾಶೀಂ ಸಾಬ ಮನಿಯಾರ, ಪಿ.ಎಸ್. ಪಾಟೀಲ, ವೈ.ಜಿ.ಪಾಟೀಲ, ರಾಜು ಮುದ್ದಡಗಿ, ಪರಶುರಾಮ ಮುದವಾಳ, ಅಶೋಕ ಹೂಗಾರ, ಅಪ್ಪಾಸಾಬ ಬಿರಾದಾರ, ಕೋಳಕೂರ, ಮಲ್ಲು ವಿಜಯಕುಮಾರ ನರಿಬೋಳ, ಶಿವು ಕೊಡಚಿ, ರವಿಕುಮಾರ ಪಾಟೀಲ, ಗುರು ಬಳಬಟ್ಟಿ ಸೇರಿದಂತೆ ಅನೇಕ ವಕೀಲರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News