ಕಲಬುರಗಿ: ಕಮಲಾಪುರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ
ಕಲಬುರಗಿ: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಕಲಬುರಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ಸಂಯುಕ್ತಾಶ್ರಯದಲ್ಲಿ ಕಮಲಾಪುರ ತಾಲ್ಲೂಕು ಮಟ್ಟದ 2025-26 ನೇ ಸಾಲಿನ ದಸರಾ ಕ್ರೀಡಾಕೂಟಕ್ಕೆ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಕ್ರೀಡಾಕೂಟವನ್ನು ಕಮಲಾಪುರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದಿ ಅವರು ಉದ್ಘಾಟಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ಸಿಪಿಐ ಶಿವಶರಣ ಸಾಹು, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೋಜನ ಗೌಡ ಪಾಟೀಲ, ಸರಕಾರಿ ನೌಕರರ ಸಂಘದ ನಿರ್ದೇಶಕ ಮಹೇಶ್ ಬಸರಕೋಡ, ಮಲ್ಲಣ್ಣ ಬಿದನೂರು, ಸಂಜಯ್ ಬಾಣದ, ತರಬೇತುದಾರರು, ತರಬೇತುದಾರ ಪ್ರವೀಣ್ ಕುಮಾರ್ ಪುಣೆ, ರಾಜಕುಮಾರ್, ಮಹಾನಂದ ವಿ ಪಾಟೀಲ, ದೇವೇಂದ್ರ ಕಟ್ಟಿಮನಿ, ರವಿಚಂದ್ರ ಸಿಬಾರಿ, ಬಸವರಾಜ ಇಂಗಲೇಶ್ವರ್, ದತ್ತಾತ್ರೇಯ ಜೇವರ್ಗಿ, ದಿಲೀಪ್ ಕುಮಾರ್, ಮಹಿಬೂಬ್ ಖಾಜಿ, ಮುಝಮ್ಮಿಲ್ ಕೆಂಭಾವಿ ಸೇರಿದಂತೆ ಮತ್ತಿತರರು ಇದ್ದರು.