ಕಲಬುರಗಿ | ಕೆರೆ ಒಡೆದು ಗ್ರಾಮಕ್ಕೆ ನೀರು : ಸ್ಥಳಕ್ಕೆ ಸಿಇಓ ಭಂವಾರ್ ಸಿಂಗ್ ಮೀನಾ ಭೇಟಿ
Update: 2025-09-21 17:21 IST
ಕಲಬುರಗಿ: ಆಳಂದ ತಾಲೂಕಿನ ಮಾಡಿಯಾಳ ಗ್ರಾಮದ ಒಪ್ಪತ್ತೇಶ್ವರ ಕೆರೆ ಒಡ್ಡು ಒಡೆದ ಪರಿಣಾಮ ಗ್ರಾಮದ ಹಲವಾರು ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ಹಾಳಾಗಿದ್ದ ಪರಿಣಾಮ ರವಿವಾರ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಗ್ರಾಮದಲ್ಲಿ ನೀರುಪಾಲಾಗಿರುವ ಮನೆಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಭಾಷ್ ಪೊಲೀಸ್ ಪಾಟೀಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪ್ರಭಾಕರ್ ಮಡ್ಡಿತೋಟ, ಶ್ರೀಕಾಂತ ಕೌಲಗಿ, ಪ್ರಭಾಕರ ಬಂಡಿ ವಡ್ಡರ, ರಮೇಶ್ ರಾಠೋಡ್, ಸಿದ್ದರಾಮ ಸಿರವಾಳ, ರಮೇಶ ಕಲಶೆಟ್ಟಿ, ಸೈಪನಸಾಬ್, ರಮೇಶ ನಾಸಿ, ಶರಣು ಬೆಳಮಗಿ, ದೋಸ್ತಿಗಿರಿ, ಸಂತೋಷ ನಿಂಬಾಳ, ಬಾಬು ತೆಲ್ಲೂರ ಸೇರಿದಂತೆ ಅನೇಕರು ಹಾಜರಿದ್ದರು.