ಕಲಬುರಗಿ | ಮಹಾರಾಷ್ಟ್ರದ ಬಸ್ ತಡೆದು ನಾಮಫಲಕಕ್ಕೆ ಮಸಿ ಬಳಿದ ಕನ್ನಡಪರ ಸಂಘಟನೆ ಮುಖಂಡರು
Update: 2025-03-01 23:59 IST
ಕಲಬುರಗಿ : ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಹಾಗೂ ಸಿಬ್ಬಂದಿಗೆ ಮಸಿ ಬಳಿದ ಪ್ರಕರಣವನ್ನು ವಿರೋಧಿಸಿ, ಮಹಾರಾಷ್ಟ್ರದ ಬಸ್ ತಡೆದು ಕನ್ನಡಪರ ಸಂಘಟನೆ ಮುಖಂಡರು ಮರಾಠಿ ನಾಮಫಲಕಕ್ಕೆ ಮಸಿ ಬಳಿದ ಘಟನೆ ಶನಿವಾರ ನಡೆದಿದೆ.
ಮಲ್ಲಿಕಾರ್ಜುನ್ ಸಾರವಾಡ ನೇತೃತ್ವದ ಜಯ ಸಂಘಟನೆಯ ಕಾರ್ಯಕರ್ತರು ನಗರದ ಆಳಂದ ಚೆಕ್ ಪೋಸ್ಟ್ ಬಳಿ ಮಹಾರಾಷ್ಟ್ರ ಸಾರಿಗೆಗೆ ಸೇರಿದ ಬಸ್ ತಡೆದು ಮರಾಠಿ ನಾಮಫಲಕಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಬಸ್ ಮೇಲೆ ಕನ್ನಡಧ್ವಜ ಹಚ್ಚಿದ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು, ಮಹಾರಾಷ್ಟ್ರದ ಬಸ್ ಚಾಲಕನಿಗೆ ಹಾರ ಹಾಕಿ ಘೋಷಣೆ ಕೂಗಿದ್ದಾರೆ ಎಂದು ತಿಳಿದುಬಂದಿದೆ.