×
Ad

ಕಲಬುರಗಿ | ಸರಕಾರಿ ಕಾಲೇಜುಗಳು ಸಮಾಜಕ್ಕೆ ಮಾದರಿಯಾಗಲಿ : ಸುರೇಶ ಅಕ್ಕಣ್ಣ

Update: 2025-07-18 12:35 IST

ಕಲಬುರಗಿ: ನಗರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಹೆಚ್ಚಾಗಿದ್ದು, ಅಲ್ಲಿನ ಉಪನ್ಯಾಸಕರು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಬೇಕಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸುರೇಶ ಅಕ್ಕಣ್ಣ ನವರು ಕರೆ ನೀಡಿದರು.

ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಜಿಲಾನಾಬಾದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಉಪನ್ಯಾಸಕರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಚಾರ್ಯರು ಮತ್ತು ಉಪನ್ಯಾಸಕರು ಫಲಿತಾಂಶ ಹೆಚ್ಚಳಕ್ಕೆ ಪೂರಕವಾಗಿ ಕೆಲಸ ಮಾಡುವುದರ ಮೂಲಕ ಸರ್ಕಾರಿ ಶಾಲೆ ಕಾಲೇಜುಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ದಶಶರಥ ರಾಠೋಡ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶಾಂತಗೌಡ ಪಾಟೀಲ ಅವರಿಗೆ ಅಭಿನಂದಿಸಲಾಯಿತು. ಇದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಬಡ್ತಿ ಹೊಂದಿ ಪ್ರಾಚಾರ್ಯರಾಗಿ ವರ್ಗಾವಣೆ ಹೊಂದಿರುವ ಮಹಾದೇವ ನಲಕಂಟೆ ಅವರಿಗೆ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶೆಮ್ರೀನ ಬೇಗಂ, ನಿವೃತ್ತ ಪ್ರಾಂಶುಪಾಲರಾದ ಅಂಬಣ್ಣ ಜಿವಣಗಿ, ರೇವಣಸಿದ್ದ ಹಂಡಿಗೆ ಪ್ರಥಮ ದರ್ಜೆ ಸಹಾಯಕರು ಬೆಂಗಳೂರು, ರಮೇಶ,ಕೀರಣ ಪಾಟೀಲ, ಆಕಾಶ,ಉಪ ಪ್ರಾಂಶುಪಾಲರಾದ ಶಿವಾನಂದ ಬಿರಾದಾರ ಮುಖ್ಯ ಗುರುಗಳಾದ ಅಹ್ಮಜದ ಹುಸೇನ್, ಉಪನ್ಯಾಸಕರಾದ ಧರ್ಮರಾಜ ಜವಳಿ, ರಮೇಶ ಮಾಡಿಯ್ಯಾಳಕರ, ಮಹೇಶ ದೇಶಪಾಂಡೆ, ಸೋಮಶೇಖರ ಚವ್ಹಾಣ ಡಾ.ವಿಶ್ವನಾಥ ಹೊಸಮನಿ , ನೀಲಮ್ಮಾ ಪಾಟೀಲ ಜಮುನಾಬಾಯಿ ಟಿಳೆ, ರೇಷ್ಮಾ ಖಾತೂನ, ಡಾ.ಆತಿಯಾ ಸುಲ್ತಾನ, ಸರೋಜಾ ಪಾಟೀಲ, ಸುಜಾತಾ ರೆಡ್ಡಿ, ಇಂದುಮತಿ, ಬಾಬುರಾವ ಮೇಲಕೇರಿ ಹಾಗೂ ದೇವೇಂದ್ರಪ್ಪ ನೆಲೋಗಿ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News