×
Ad

ಕಲಬುರಗಿ | ಆರೆಸ್ಸೆಸ್‌ ಪಥಸಂಚಲನದಲ್ಲಿ ಲಾಠಿ ಬಿಟ್ಟು ಭಾರತದ ಬಾವುಟ ಹಿಡಿಯಲಿ : ಕೆ.ನೀಲಾ

Update: 2025-10-27 17:04 IST

ಕಲಬುರಗಿ : ಚಿತ್ತಾಪುರದಲ್ಲಿ ಪಥಸಂಚಲನ ವಿವಾದ ನ್ಯಾಯಲಯದಲ್ಲಿ ಇದ್ದು, ವಿಭಿನ್ನವಾಗಿರುವ ಪರಿಸ್ಥಿತಿ ಸೃಷ್ಠಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸೌಹಾರ್ದ, ಸಂವಿಧಾನದ ಮೌಲ್ಯಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೆಸ್ಸೆಸ್‌ ಪಥಸಂಚಲನದಲ್ಲಿ ಲಾಠಿಗೆ ಅನುಮತಿ ನೀಡಬಾರದು ಎಂದು ಸೌಹಾರ್ದ ಕರ್ನಾಟಕ ಸಂಘಟನೆ ಸದಸ್ಯರು ಆಗ್ರಹಿಸಿದ್ದಾರೆ.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದಸ್ಯೆ ಕೆ. ನೀಲಾ ಮಾತನಾಡಿ, ಆರೆಸ್ಸೆಸ್‌ 52 ವರ್ಷಗಳವರೆಗೂ ತನ್ನ ಕಚೇರಿಯ ಮೇಲೆ ಭಾರತದ ಬಾವುಟ ಹಾರಿಸಿಲ್ಲ. ಮಾರಕಾಸ್ತ್ರಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು, ವಿದ್ಯಾರ್ಥಿಗಳ ಕೈಗೆ ತಲವಾರು ಕೊಡಬೇಕು, ಶತೃಗಳು ಆಕ್ರಮಣ ಮಾಡುತ್ತಾರೆ ಎಂದೆಲ್ಲ ಅದು ಸುಳ್ಳು ಹೇಳುತ್ತ ಬಂದಿರುವುದರಿಂದ ಸಮಾಜದಲ್ಲಿ ಅನೈಕ್ಯತೆ, ಭಯ, ಅಸ್ಥಿರತೆ ವಾತಾವರಣ ಸೃಷ್ಟಿಸಲಾಗುತ್ತಿದೆ. ದಸರಾ ಸಂದರ್ಭದಲ್ಲಿ ಮಹಿಳೆಯರ ಕೈಗೆ ತಲವಾರು ಕೊಟ್ಟು ಮೆರವಣಿಗೆ ಮಾಡುವ ಪರಿಪಾಠ ಬೆಳೆಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್‌ ಪಥಸಂಚಲನೆಯು ವಿವಾದ, ಭಯ, ಆತಂಕ ಸೃಷ್ಟಿ ಮಾಡಿರುವುದರಿಂದ ಪಥಸಂಚಲನೆಗೆ ಅನುಮತಿ ಕೊಡುವುದು ಉಚಿತವಲ್ಲವಾಗಿದೆ ಎಂದರು.

ಆದರೆ ಪಥ ಸಂಚಲನದ ಹೊತ್ತಿನಲ್ಲಿ ಕೈಯಲ್ಲಿ ಲಾಠಿ, ಆಯುಧಗಳು ಹಿಡಿಯುವುದು ಪ್ರದರ್ಶಿಸುವುದು ಮತ್ತು ಸಮಾಜದಲ್ಲಿ ಭಯ ಉಂಟು ಮಾಡುವುದು ಆರೆಸ್ಸೆಸ್‌ ಅನುಚಾನವಾಗಿ ನಡೆಸಿಕೊಂಡು ಬಂದಿದೆ. ನೂರನೆ ಸಂಭ್ರಮಾಚರಣೆಯ ಹೆಸರಿನಲ್ಲಿ ಎಲ್ಲ ಕಡೆಯೂ ಪಥಸಂಚಲನ ಮಾಡುತ್ತಿದೆ. ಪಥಸಂಚಲನ ಮಾಡುವಾಗ ಶಿಸ್ತಿನಿಂದ ಮಾಡಲಾಗುತ್ತದೆ ಎಂದು ಅದು ಮೇಲ್ನೋಟಕ್ಕೆ ಹೇಳುತ್ತದೆ. ಲಾಠಿ ಎಂಬ ಆಯುಧವು ಅಪಾಯಕಾರಿಯೇ. ಅನೇಕ ಜನರು ಲಾಠಿಯೊಂದಿಗೆ ಪುರಪ್ರವೇಶ ಮಾಡುವುದು ಡ್ರಂನ ಕರ್ಕಶ ಶಬ್ದದೊಂದಿಗೆ ನಡೆಯುವುದು ಎಲ್ಲವೂ ಮಕ್ಕಳ ಮೇಲೆ ಮತ್ತು ಯುವಜನತೆಯ ಮನೋಭೂಮಿಕೆಯ ಮೇಲೆ ಭಯದ, ಆತಂಕದ, ಆಕ್ರಮಣಕಾರಿ ಪ್ರಭಾವ ಬೀರುತ್ತದೆ. ಭಯ ಪಡಿಸುವ ಲಾಠಿ ಬಿಟ್ಟು ಎಲ್ಲರ ಐಕ್ಯತೆಯ ಭಾರತದ ಬಾವುಟ ಹಿಡಿಯಲಿ ಎಂದು ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಮಿನಾಕ್ಷಿ ಬಾಳಿ, ಅರ್ಜುನ್ ಭದ್ರೆ, ಪ್ರಭುಲಿಂಗ್ ಮಹಾಗಾಂವಕರ್, ಆರ್.ಜಿ ಶಟಗರ್, ಮಾರುತಿ ಗೋಖಲೆ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News