×
Ad

ಕಲಬುರಗಿ | ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸೊಣ : ಮಲ್ಲಣ್ಣ ಯಲಗೋಡ

Update: 2025-10-27 18:38 IST

ಕಲಬುರಗಿ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ತಾಲೂಕಿನಲ್ಲಿ ಆಚರಿಸಲಾಗುವುದು. ಈ ಭಾರಿ ಕನ್ನಡ ಪರ ಸಂಘಟನೆಗಳ ಬೇಡಿಕೆಯಂತೆ ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ರಾಜ್ಯೋತ್ಸವವನ್ನು ಆಚರಿಸೊಣ ಎಂದು ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ ಹೆಳಿದರು.

ಜೇವರ್ಗಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಕುರಿತು ಪೂರ್ವಭಾವಿ  ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಎಲ್ಲಾ ಕನ್ನಡ ಪರ ಸಂಘಟನೆಗಳ ಮುಖಂಡರು ಸಲಹೆಗಳನ್ನು ನೀಡಿದ್ದು, ಅದರಂತೆ ಈ ಬಾರಿ ವಿಭಿನ್ನವಾಗಿ ಆಚರಿಸಲು ಪ್ರಯತ್ನಿಸುತ್ತೆವೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಲೂಕಿನ ಎಲ್ಲರೂ ಒಗ್ಗೂಡಿ ಸಂಭ್ರಮ ಸಡಗರದಿಂದ ಆಚರಿಸೊಣ. ಕನ್ನಡದ ಬಗ್ಗೆ ಯುವ ಪಿಳಿಗೆಗೆ ತಿಳಿಸುವುದು ಬಹಳ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಒಂದು ಅರ್ಥಪೂರ್ಣವಾಗಿ ಆಚರಿಸೊಣ ಎಂದರು.

ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿ, ಕನ್ನಡ ಪರ ಹೋರಾಟಗಾರರು ಈ ಕಾರ್ಯಕ್ರಮದ ಕೆಂದ್ರಬಿಂದುಗಳಂತೆ. ಅವರ ಸಹಾಯ ಸಹಕಾರ ಈ ಕಾರ್ಯಕ್ರಮಕ್ಕೆ ಅವಶ್ಯವಿದೆ. ತಾಲೂಕಿನ ಎಲ್ಲರೂ ಕೂಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಶಂಭುಲಿಂಗ ದೇಸಾಯಿ, ರವಿಚಂದ್ರ ರೆಡ್ಡಿ, ಸತಿಷ ಸಾಂಗನ್, ಹುಲಿಕಂಠರಾಯ ಸುಂಬುಡ್, ಉಮೇಶ ಶರ್ಮಾ, ಶೋಭಾ ಸಜ್ಜನ, ಶ್ರೀಮತಿ ಬಸಮ್ಮ, ಸಂತೋಷ, ಭಿಮರಾಯ ನಗನೂರ, ಎಸ್ ಕೆ ಬಿರಾದಾರ, ಭಿಮಾಶಮಕರ ಬಿಲ್ಲಾಡ, ಬಸವರಾಜ ಬಾಗೇವಾಡಿ, ಕಾಶಿನಾತ ಮಂದೆವಾಲ, ಶ್ರೀಹರಿ ಕರಕಳ್ಳಿ, ರವಿ ಕೂಳಗೇರಿ, ಸಿದ್ದು ಕೇರೂರ, ಬಂಗಾರಪ್ಪ ಹಳ್ಳಿ, ಸಿದ್ದಣ್ಣಗೌಡ ಮಾವೂನರ, ಮುನೀರ ಪಾಶ್ ಕಳ್ಳಿ, ಮಾಂತೆಶ ಹಾದಿಮನಿ, ಶಿವಲಿಂಗ ಹಳ್ಳಿ, ರಾಜು ಭಂಟನೂರ, ಯಶವಂತ ಬಡಿಗೇರ ಮಂದೆವಾಲ, ಶರಬು ಕಲ್ಯಾಣಿ, ಸಾಯಬಣ್ಣ ಕಲ್ಯಾಣಕರ್, ದಶರತ, ಶ್ರೀಶೈಲ ಪೂಜಾರಿ, ಗುಂಡಪ್ಪ ಜಡಗಿ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News