ಕಲಬುರಗಿ | ಕುರಿಕೋಟಾ ಸೇತುವೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
Update: 2025-03-04 23:13 IST
ಕಲಬುರಗಿ : ಕಮಲಾಪುರ ತಾಲೂಕಿನ ಕುರಿಕೋಟಾ ಸೇತುವೆಯಲ್ಲಿ ಮಂಗಳವಾರ ಮೃತ ದೇಹದ ಪತ್ತೆಯಾಗಿದೆ.
ಕಮಲಾಪುರ ತಾಲೂಕಿನ ಕುರಿಕೋಟಾ ಗ್ರಾಮದ ಶಿವರಾಜ ರೇವಣಸಿದ್ದಪ್ಪ ಸಲಗರ (45) ಮೃತವ್ಯಕ್ತಿ ಎಂದು ತಿಳಿದುಬಂದಿದೆ.
ವ್ಯಕ್ತಿಯು ಅನಾರೋಗ್ಯದ ಸಮಸ್ಯೆಯಿಂದ ಮಾನಸಿಕ ಒತ್ತಡ ಹೆಚ್ಚಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಎರಡು ದಿನಗಳಿಂದ ನೀರಿನಲ್ಲಿ ಮೃತ ದೇಹ ಬಿದ್ದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.