ಕಲಬುರಗಿ | ಮನುವಾದಿ ವ್ಯವಸ್ಥೆ ಹೆಣ್ಣನ್ನು ಅತ್ಯಂತ ಕೀಳಾಗಿ ಕಂಡಿದೆ : ಡಾ.ಇಂದುಮತಿ ಪಾಟೀಲ್
ಕಲಬುರಗಿ: ಸಮಾಜದಲ್ಲಿ ಹೆಣ್ಣನ್ನು ಮನುವಾದಿ ವ್ಯವಸ್ಥೆ ಅತ್ಯಂತ ಕೀಳಾಗಿ ನಡೆಸಿಕೊಂಡು ಬಂದಿದೆ. ಪ್ರಕೃತಿಯಲ್ಲಿ ಇರುವ ಮಣ್ಣು, ನೀರು, ಮತ್ತು ಬೆಂಕಿಯೋಪಾದಿಯಲ್ಲಿ ಅವಳನ್ನು ಪರಿಗಣಿಸಲಾಗಿದೆ. ಅವಳೂ ಸಹ ಪುರುಷನಂತೆ ಒಂದು ಜೀವ ಎಂದು ತಿಳಿಯಬೇಕು. ಮಹಿಳೆಗೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಸಿಕ್ಕಾಗ ಮಾತ್ರ ಸಬಲಳಾಗುತ್ತಾಳೆ ಎಂದು ಫರಹತಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಇಂದುಮತಿ ಪಾಟೀಲ್ ಅಭಿಪ್ರಾಯಪಟ್ಟರು.
ಅವರು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಇವುಗಳ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಕಲಾವತಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಲಕ್ಷ್ಮಣ್ ಭೋಸ್ಲೆ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ಕಾರ್ಯದರ್ಶಿ ಡಾ.ಶರಣಪ್ಪ ಸೈದಾಪುರ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ.ಸಂದೀಪ ತಿವಾರಿ ಹಾಗೂ ಮಹಿಳಾ ದೌರ್ಜನ್ಯ ವಿರೋಧಿ ಘಟಕದ ಸಂಚಾಲಕರಾದ ರಾಬಿಯಬೇಗಂ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ಮಹಿಳಾ ಸಿಬ್ಬಂದಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ.ರವೀಂದ್ರ ಕುಮಾರ್ ಮೋಹನ್ ಬೈಲು ಪತ್ತಾರ್, ವಿನಾಶ್, ಡಾ.ಹೊನ್ನೂರ್ ಸ್ವಾಮಿ ಕುಮಾರಿ ಅಪರಣ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಸಂಚಾಲಕ ಡಾ.ಖಾಜಾವಲಿ ಈಚನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈ.ಶಿ ನಿರ್ದೇಶಕ ಡಾ.ನಾಗರೆಡ್ಡಿ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಭೀಮಣ್ಣ ನಿರೂಪಿಸಿದರು. ಮಹಿಳಾ ದೌರ್ಜನ್ಯ ತಡೆ ಸಮಿತಿಯ ಸಂಚಾಲಕಿ ಡಾ.ಶಿಲ್ಪಾ ಜಗದೀಶ ವಂದಿಸಿದರು.