×
Ad

ಕಲಬುರಗಿ | ಸಮೀಕ್ಷೆಯಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಿ: ಸೋಮಶೇಖರ್

Update: 2025-09-25 19:51 IST

ಕಲಬುರಗಿ: ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಿಸಿದ್ದು, ಪಂಚಮಸಾಲಿ ಸಮುದಾಯವು ಲಿಂಗಾಯತ ಪಂಚಮಸಾಲಿ ಎಂದು ಸಮೂದಿಸಬೇಕು ಎಂದು ಕಲಬುರಗಿ ಜಿಲ್ಲಾ ಪಂಚಸೇನೆ ಅಧ್ಯಕ್ಷ ಸೋಮಶೇಖರ್ ಬಿ. ಮೂಲಗೆ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿದ ಅವರು, ಸಮೀಕ್ಷೆಯಲ್ಲಿರುವ ಜಾತಿ ಕಾಲಂ ಸಂಖ್ಯೆ 9ರಲ್ಲಿ ಕೋಡ್ ಸಂಖ್ಯೆ ಎ-0868ರಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನೋಂದಾಯಿಸಬೇಕು. ಸಮಾಜದವರು ಯಾವುದೇ ಗೊಂದಲಕ್ಕೆ ಕಿವಿಗೊಡದೆ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಿಕೊಳ್ಳಬೇಕು ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೂಚಿಸಿದ್ದಾರೆ. ನಮ್ಮ ಸಮಾಜದ ಎಳ್ಗೆಗೆ ಶ್ರಮಿಸಿದ ಶ್ರೀಗಳೇ ನಮಗೆ ಮಾರ್ಗ. ಹೀಗಾಗಿ ಕರ್ನಾಟಕದ ಸಮಸ್ತ ಪಂಚಮಸಾಲಿ ಸಮಾಜದವರು ಶ್ರೀಗಳ ಆದೇಶ ತಪ್ಪದೆ ಪಾಲಿಸೋಣ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News