ಕಲಬುರಗಿ | ಸರಸ್ ಮೇಳದ ಮಳಿಗೆಗಳಿಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭೇಟಿ
ಕಲಬುರಗಿ : ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, ಗುರುವಾರ ಸಂಜೆ ಇಲ್ಲಿನ ಶ್ರೀ ಶರಣಬಸವೇಶ್ವರ ಜಾತ್ರೆ ಮೈದಾನದಲ್ಲಿ ನಡೆಯುತ್ತಿರುವ ನಮ್ಮ ಸರಸ್ ಮೇಳಕ್ಕೆ ಭೇಟಿ ನೀಡಿದರು.
ಮೇಳದಲ್ಲಿ ವಿವಿಧ ರಾಜ್ಯದಿಂದ ಬಂದ ಮಹಿಳಾ ಸ್ವ-ಸಹಾಯ ಗುಂಪುಗಳು ಹಾಕಿರುವ ಮಳಿಗೆಗಳಿಗೆ ಭೇಟಿ ನೀಡಿ ವಸ್ತು ಮತ್ತು ಉತ್ಪನ್ನಗಳ ಕುರಿತು ಮಾಹಿತಿ ಪಡೆದುಕೊಂಡ ಸಚಿವರು, ಇದೂವರೆಗೆ ಆದ ವ್ಯಾಪಾರ ವಹಿವಾಟಿನ ಕುರಿತು ಸಹ ಚರ್ಚೆ ನಡೆಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ಎಚ್.ಓ ಡಾ.ಶರಣಬಸಪ್ಪ ಖ್ಯಾತನಾಳ ಜೊತೆಗಿದ್ದರು.
ಸರಸ್ ಮೇಳದಲ್ಲಿ ಬೆಳಿಗ್ಗೆ ಖರೀದಿದಾರರು ಮತ್ತು ಮಾರಾಟಗಾರರ ಸಭೆ ನಡೆಯಿತು. ಮಾಹಿತಿ ಮತ್ತು ಅಭ್ಯಾಸಗಳ ಅನುಷ್ಠಾನ ಕುರಿತು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ , ನಬಾರ್ಡಗ ಸೀನಿಯರ್ ಮ್ಯಾನೇಜರ್ ತಾಜುದ್ದೀನ್ ಅಬ್ದುಲ್ ಗಫರ್, ಸ್ವಾಭಿಮಾನಿ ಸ್ವದೇಶಿ ಮಾರ್ಟ್ ಉದ್ದಿಮೆದಾರ ಅನಿಲ್ ತಂಬಾಕೆ ತಮ್ಮ ಅನುಭವ ಹಂಚಿಕೊಂಡರು.