ಕಲಬುರಗಿ | ಕಾಣೆಯಾಗಿದ್ದ ಬಾಲಕ 14 ತಿಂಗಳ ಬಳಿಕ ಪತ್ತೆ
Update: 2025-07-21 20:21 IST
ಕಲಬುರಗಿ: ಕಳೆದ 14 ತಿಂಗಳಿನಿಂದ ನಾಪತ್ತೆಯಾಗಿದ್ದ ನನ್ನ ಮಗ ಪತ್ತೆಯಾಗಿದ್ದು, ಈಗ ಹುಷಾರಾಗಿ ಮನೆಗೆ ಬಂದಿದ್ದಾನೆ ಎಂದು ನಾಪತ್ತೆಯಾಗಿದ್ದ ಬಾಲಕನ ತಂದೆ ಫೀನಿಕ್ಸ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧಾರ್ ಕಾರ್ಡ್ ಓಟಿಪಿ ಕಾರಣಕ್ಕಾಗಿ ನನನ್ನು ಮಗ ಸಂಪರ್ಕ ಮಾಡಿದಾಗ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವುದು ಗೊತ್ತಾಗಿದೆ. ಬಳಿಕ ಸ್ನೇಹಿತರನ್ನು ಸಂಪರ್ಕಿಸಿದಾಗ ನಾಪತ್ತೆಯಾಗಿದ್ದ ಮಗ ವಿನಾಯಕ (17) ಸಿಕ್ಕಿದ್ದು, ಆತನಿಗೆ ರಕ್ಷಣೆ ನೀಡಿ ಎಂದು ಹೇಳಿದ್ದೆ. ಬಳಿಕ ನಾನೇ ಬೆಂಗಳೂರಿಗೆ ಹೋಗಿ ಮಗನನ್ನು ವಾಪಸ್ಸು ಕರೆ ತಂದಿದ್ದೇನೆ ಎಂದು ಹೇಳಿದರು.
ಕಳೆದ ಮೇ 30 ರಂದು ತನ್ನ ಮಗ ನಾಪತ್ತೆಯಾಗಿದ್ದನು. ದೂರು ಕೊಟ್ಟರೂ ಪೊಲೀಸರು ಮಗನ ಪತ್ತೆಗೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು..
ಸುದ್ದಿಗೋಷ್ಠಿಯಲ್ಲಿ ನಾಪತ್ತೆಯಾಗಿದ್ದ ಬಾಲಕ ವಿನಾಯಕ ಫೀನಿಕ್ಸ್ ಇದ್ದರು.