×
Ad

ಕಲಬುರಗಿ | ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಸವರಾಜ್ ಮತ್ತಿಮಡು ಚಾಲನೆ

Update: 2025-04-04 21:34 IST

ಕಲಬುರಗಿ : ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುಸನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವ ನೃಪತುಂಗ ಕಾಲೋನಿಯಲ್ಲಿ ಕೆಕೆಆರ್‌ಡಿಬಿ ಕ್ರಿಯಾ ಯೋಜನೆಯಲ್ಲಿ ಮಂಜೂರಾದ 111.49 ಲಕ್ಷ ರೂ.ಗಳ ವೆಚ್ಚದ ಓ ಹೆಚ್ ಟಿ ಟ್ಯಾಂಕ್ ಮತ್ತು ಪೈಪ್‌ ಲೈನ್ ಕಾಮಾಗಾರಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮಡು ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ನೃಪತುಂಗ ಕಾಲೋನಿಯ ಜನರ ಬಹಳ ದಿನದ ಬೇಡಿಕೆಯಾಗಿದ್ದ ವಾಟರ್ ಟ್ಯಾಂಕ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪೈಪ್‌ ಲೈನ್ ಹಾಗೂ ಗಾರ್ಡನ್ ದುರಸ್ತಿಗೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಬಡಾವಣೆಯ ಮುಖಂಡರು ಮಾತನಾಡಿ, ನೃಪತುಂಗ ಕಾಲೋನಿಯ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ವಾಟರ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಸವರಾಜ್ ಮತ್ತಿಮಡು ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿನೋದ ಕೆಬಿ, ಬಸವರಾಜ್ ಪಾಟೀಲ್, ಶಿವಾಜಿ ಚವ್ಹಾಣ, ಸೂರ್ಯಕಾಂತ ನಾಶಿ, ಶಿವಕುಮಾರ ಹೊಸಪೇಟ, ಯೂನೂಸ್ ಪಾಶಾ, ಆನಂದಕುಮಾರ್, ಮಲ್ಲಿಕಾರ್ಜುನ ಪಾಟೀಲ್, ಅಣವೀರ ಇಂಗಿಶೆಟ್ಟಿ, ರಾಜಕುಮಾರ ಚವ್ಹಾಣ ಆರ್ಎಂಸಿ, ಉದಯ ಪಾಟೀಲ, ವಿರೇಶ ಪಾಟೀಲ, ರೇವಣಸಿದ್ದಯ್ಯಾ ಮಠಪತಿ, ರಾಜಕುಮಾರ ಡಿ, ಅಂಬಾರಾಯ ಓಕಳಿ ಸೇರಿದಂತೆ ಬಡಾವಣೆಯ ಅನೇಕರು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News