×
Ad

ಕಲಬುರಗಿ | ಬಡ್ತಿ ಸರಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದಿಂದ ಎಂಎಲ್ಸಿ ಶಶೀಲ್ ನಮೋಶಿಗೆ ಸನ್ಮಾನ

Update: 2025-03-23 22:13 IST

ಕಲಬುರಗಿ : ಜಿಲ್ಲೆಯ ಬಡ್ತಿ ಸರಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ವತಿಯಿಂದ ವಿಧಾನಪರಿಷತ್ ಸದಸ್ಯ ಶಶೀಲ್ ಜಿ‌ ನಮೋಶಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವಿಧಾನ ಪರಿಷತ್ ಅಧಿವೇಶನದ ಕಲಾಪದಲ್ಲಿ ಪ್ರಶ್ನೊತ್ತರ ವೇಳೆ ಈ ರಾಜ್ಯದ ಬಡ್ತಿ ಸರಕಾರಿ ಪ್ರೌಢ ಶಾಲಾ ಶಿಕ್ಷಕರ ಬಹು ದಿನಗಳ ಪ್ರಮುಖ ಬೇಡಿಕೆಯಾದ 10,15, 20, 25 ಮತ್ತು 30 ವರ್ಷಗಳ ಸೇವಾವಧಿಯ ಕಾಲಮಿತಿ ವೇತನ ಮುಂಬಡ್ತಿ (ಟೈಮ್ ಬಾಂಡ್ ಇನ್ಕ್ರಿಮೆಂಟ್) ವಿಷಯದ ಕುರಿತು ಸುಧಿರ್ಘವಾಗಿ ಚರ್ಚೆ ಮಾಡಿ, ನಮೋಶಿ ಅವರು ರಾಜ್ಯ ಸರಕಾರ ಗಮನ ಸೆಳೆದಿದ್ದಾರೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ರವರು ಈ ಸಮಸ್ಯೆಯ ಕುರಿತಾಗಿ ಸಮಿತಿ ರಚಿಸಿ ಕಾಲಮಿತಿಯೊಳಗೆ ಪಡೆದು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮವಹಿಸುವುದಾಗಿ ವಿಶ್ವಾಸ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶಿಕ್ಷಕರ ಸಮಸ್ಯೆಗೆ ಧ್ವನಿಯಾದ ಶಶೀಲ ನಮೋಶಿ ಅವರಿಗೆ ಇದಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಲು ಒತ್ತಾಯಿಸಬೇಕೆಂದು ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿ, ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಚಿನ್ನೂರ, ಮಹೇಶ ಬಸರಕೊಡ, ಶಿವಕುಮಾರ ಹೊಸಮನಿ, ಶರಣಪ್ಪ ಕಟ್ಟಿ, ಅನೀಲ ಕುಮಾರ ಕುಮಸಿಕರ್, ಮಲ್ಲಿಕಾರ್ಜುನ ಮಾಚನೂರ, ಮಹಾದೇವಪ್ಪ ಚೇಗಂಟಿ, ಸಾಯಬಣ್ಣ ಲಂಗೋಟಿ, ಮಹಿಬೂಬ ವಾಲಿಕಾರ, ಪೀರಪ್ಪ ಡೊಳ್ಳೆ, ಅಪ್ಪಾರಾಯ ಅಂಬುರೆ ಸೇರಿದಂತೆ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News