ಕಲಬುರಗಿ | ಮಂಗಗಳಿಂದ ದಾಳಿ : ನಾಲ್ವರಿಗೆ ಗಂಭೀರ ಗಾಯ
Update: 2025-08-19 22:56 IST
ಕಲಬುರಗಿ: ಮಂಗಗಳಿಂದ ದಾಳಿಗೆ ಒಳಗಾದ ನಾಲ್ಕು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ನಡೆದಿದೆ.
ದಂಡೋತಿ ಗ್ರಾಮದಲ್ಲಿ ಮಂಗಗಳ ಹಾವಳಿಗೆ ಸ್ಥಳೀಯರು ಆತಂಕದಲ್ಲಿದ್ದಾರೆ. ಮಂಗಗಳಿಂದ ಭೀಕರ ದಾಳಿಗೆ ತುತ್ತಾಗಿರುವ ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಸಿಕ್ಕಸಿಕ್ಕವರ ಮೇಲೆ ದಾಳಿ ಮಂಗಗಳು ನಡೆಸುತ್ತಿವೆ ಎನ್ನಲಾಗುತ್ತಿದೆ.
ಕೂಡಲೇ ಮಂಗಗಳನ್ನು ಸೆರೆ ಹಿಡಿದು ಗ್ರಾಮದ ಜನರ ಆತಂಕ ದೂರ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.