×
Ad

ಕಲಬುರಗಿ | ಹೊಸ ಅಪರಾಧಿಕ ಕಾನೂನು ಕಾರ್ಯಾಗಾರ ಆಯೋಜನೆ

Update: 2025-06-17 20:41 IST

ಕಲಬುರಗಿ: ಕಲಬುರಗಿ ನಗರದ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಕಲಬುರಗಿ ನಗರ ಮತ್ತು ಜಿಲ್ಲೆ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಯ ಪಿ.ಎಸ್.ಐ. ದಿಂದ ಡಿವೈ.ಎಸ್.ಪಿ ವರೆಗಿನ ಅಧಿಕಾರಿಗಳಿಗೆ ಸೋಮವಾರ “ಹೊಸ ಅಪರಾಧಿಕ ಕಾನೂನು” ಕಾರ್ಯಾಗಾರ ಆಯೋಜಿಸಲಾಗಿತ್ತು.

ಪೊಲೀಸ್ ತರಬೇತಿ ಮಹಾವಿದ್ಯಾಲಯದ ಎಸ್.ಪಿ. ಮತ್ತು ಪ್ರಾಂಶುಪಾಲ ಡೆಕ್ಕಾ ಕಿಶೋರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರವನ್ನು ಹೈದರಾಬಾದಿನ ಸಿ.ಡಿ.ಟಿ.ಇ ಡಿ.ಐ.ಜಿ ಮತ್ತು ನಿರ್ದೇಶಕ ರಾಜಶೇಖರ ಎನ್. ಉದ್ಘಾಟಿಸಿ “ಹೊಸ ಅಪರಾಧಿಕ ಕಾನೂನು” ಕುರಿತು ಬೋಧನೆ ಮಾಡಿದರು.

ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ಚೆನ್ನಬಸವಣ್ಣ ಲಂಗೋಟಿ ಸೇರಿದಂತೆ ಕಾರ್ಯಗಾರದಲ್ಲಿ ನೂರಾರು ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News