×
Ad

ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಾದ್ಯಂತ 7 ಜೋಳ, 8 ಭತ್ತ ಖರೀದಿ ಕೇಂದ್ರ ಸ್ಥಾಪನೆ: ಕಲಬುರಗಿ ಡಿಸಿ ಬಿ.ಫೌಝಿಯಾ ತರನ್ನುಮ್

Update: 2025-10-19 22:23 IST

ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಹಿಂಗಾರು ಮತ್ತು ಮುಂಗಾರು ಋತುವಿನ ಕೇಮದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರವು ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಜೋಳ ಮತ್ತು ಭತ್ತ ಖರೀದಿಗೆ ಜಿಲ್ಲೆಯಾದ್ಯಂತ ಜಿಲ್ಲೆಯಾದ್ಯಂತ 7 ಜೋಳ ಮತ್ತು 8 ಭತ್ತ ಖರೀದಿ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.

ಜಿಲ್ಲಾ ಟಾಸ್ಕಪೊರ್ಸ ಸಮಿತಿಯ ತೀರ್ಮಾನದಂತೆ ಕಲಬುರಗಿ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ 7 ಜೋಳ ಖರೀದಿ ಕೇಂದ್ರ ಮತ್ತು ಭತ್ತ ಖರೀದಿಗೆ 8 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗುರುತಿಸಲಾಗಿದೆ ಎಂದಿದ್ದಾರೆ.

ಎಫ್.ಎ.ಕ್ಯೂ ಗುಣಮಟ್ಟದ ಬಿಳಿ ಜೋಳ-ಹೈಬ್ರಿಡ್ ಪ್ರತಿ ಕ್ವಿಂಟಾಲ್ ಗೆ 3,371 ರೂ. ಮತ್ತು ಬಿಳಿ ಜೋಳ-ಮಾಲ್ದಂಡಿ ಪ್ರತಿ ಕ್ವಿಂಟಾಲ್ ಗೆ 3,421 ರೂ. ನಿಗದಿ ಮಾಡಿದ್ದು, ಪ್ರತಿ ರೈತನಿಂದ ಎಕರೆಗೆ 15 ಕ್ವಿಂಟಾಲ್‌ನಂತೆ ಗರಿಷ್ಠ 150 ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತದೆ.

ಜೋಳ ಮಾರಾಟಕ್ಕೆ ದಿ.01-12-2025 ರಿಂದ ದಿ.31-03-2026ರ ವರೆಗೆ ನೋಂದಣಿ ಮಾಡಿಕೊಂಡು ದಿ.01-01-2026 ರಿಂದ ದಿ.31-03-2026ರ ವರೆಗೆ ಮಾರಾಟ ಮಾಡಬಹುದಾಗಿದೆ.

ಅದೇ ರೀತಿ ಎಫ್.ಎ.ಕ್ಯೂ ಗುಣಮಟ್ಟದ ಭತ್ತ-ಸಾಮಾನ್ಯ ಪ್ರತಿ ಕ್ವಿಂಟಾಲ್ ಗೆ 2,369 ರೂ. ಮತ್ತು ಭತ್ತ-ಗ್ರೇಡ್ 'ಎ' ಪ್ರತಿ ಕ್ವಿಂಟಾಲ್ ಗೆ 2,389 ರೂ. ನಿಗದಿ ಮಾಡಲಾಗಿದ್ದು, ಪ್ರತಿ ರೈತನಿಂದ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಠ 50 ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತಿದೆ. ಭತ್ತ ಖರೀದಿಗೆ ಈಗಾಗಲೆ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇದೇ ಅಕ್ಟೋಬರ್ 31ರ ವರೆಗೆ ನೊಂದಾಯಿಸಿ ದಿ.01-11-2025 ರಿಂದ ದಿ.28-02-2026ರ ವರೆಗೆ ಮಾರಾಟ ಮಾಡಬಹುದಾಗಿದೆ. ಜಿಲ್ಲೆಯ ರೈತಾಪಿ ವರ್ಗ ಇದರ ಲಾಭ ಪಡೆಯುವಂತೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿಯ ದೂರವಾಣಿ ಸಂಖ್ಯೆ:08472-254984 ಹಾಗೂ 9448496023ಕ್ಕೆ‌ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.

ಜೋಳ ಖರೀದಿ ಕೇಂದ್ರಗಳು ಮತ್ತು ಅಧಿಕಾರಿಗಳ ವಿವರ:

ಅಫಜಲಪೂರ, ಚಿತ್ತಾಪುರ ಹಾಗೂ ಕಲಬುರಗಿ ತಾಲೂಕಿಗೆ ಪ್ರಕಾಶ ಪವಾರ- 9845359642, ಆಳಂದ ಮತ್ತು ಜೇವರ್ಗಿ ತಾಲೂಕಿಗೆ ರಾಜಕುಮಾರ- 8880659915, ಚಿಂಚೋಳಿ-ವಿರೇಂದ್ರ ಓತಗಿ ಆಹಾರ ನಿರೀಕ್ಷಕರು ಚಿಂಚೋಳಿ, ಸೇಡಂ ತಾಲೂಕಿಗೆ ಆಹಾರ ಶಿರಸ್ತೆದಾರ ಶಿವರಾಜಕುಮಾರ ಅವರನ್ನು ಸಂಪರ್ಕಿಸಬಹುದಾಗಿದೆ.

ಭತ್ತ ಖರೀದಿ ಕೇಂದ್ರಗಳು ಮತ್ತು ಅಧಿಕಾರಿಗಳ ವಿವರ:

ಚಿತ್ತಾಪುರ ತಾಲೂಕಿನ ಸನ್ನತ್ತಿ ಮತ್ತು ಕೊಲ್ಲೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಖರೀದಿ ಕೇಂದ್ರಕ್ಕೆ ಪ್ರಕಾಶ ಪವಾರ-9845359642, ಸೇಡಂ ತಾಲೂಕಿನ ಮುಧೋಳ, ನಾಡೇಪಲ್ಲಿ, ಮದನಾ ಹಾಗೂ ಕೋಲಕುಂದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಖರೀದಿ ಕೇಂದ್ರಕ್ಕೆ ಸೇಡಂ ಆಹಾರ ಶಿರಸ್ತೆದಾರ ಶಿವರಾಜಕುಮಾರ ಹಾಗೂ ಜೇವರ್ಗಿ ತಾಲೂಕಿನ ಬಳಬಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಯಡ್ರಾಮಿ ತಾಲೂಕಿನ ಮಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೇಂದ್ರಕ್ಕೆ ರಾಜಕುಮಾರ-8880659915 ಅವರನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News