ಕಲಬುರಗಿ | ʼನಿಧಿ ಆಪ್ಕೆ ನಿಕಟ್ʼ ಕಾರ್ಯಕ್ರಮ
ಕಲಬುರಗಿ : ನಗರದ ಹೆಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಂಗಳವಾರ ಕಾರ್ಮಿಕರ ಭವಿಷ್ಯ ನಿಧಿ ಇಲಾಖೆಯ ವತಿಯಿಂದ ಮೇ ತಿಂಗಳ "ನಿಧಿ ಆಪ್ಕೆ ನಿಕಟ್" ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮ ನಡೆಯಿತು.
ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮ ಉದ್ಯೊಗದಾತರು ಮತ್ತು ಉದ್ಯೋಗಿಗಳಿಗೆ ಕುಂದುಕೊರತೆ ಪರಿಹಾರ ವೇದಿಕೆ ಮತ್ತು ಮಾಹಿತಿ ವಿನಿಮಯ ಜಾಲ ಮಾತ್ರವಲ್ಲದೆ, ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯಕ್ಕೂ ಒಂದು ವೇದಿಕೆಯಾಗಿದೆ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಎಂ. ಸುಬ್ರಹ್ಮಣ್ಯಂ, ಭವಿಷ್ಯ ನಿಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನೆ ಮತ್ತು ಮಹತ್ವದ ಬಗ್ಗೆ ವಿವರವಾಗಿ ತಿಳಿಸಿದರು. ಭವಿಷ್ಯ ನಿಧಿ ಸದಸ್ಯರ ವಿವಿಧ ಬಗೆಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಇ.ಪಿ.ಎಫ್ ಪ್ರಾದೇಶಿಕ ಸಮಿತಿ ಸದಸ್ಯ ಶಂಕರ ಸುಲೆಗಾಂವ, ವೈದ್ಯಕೀಯ ಅಧಿಕ್ಷಕ ಡಾ. ಶಾಂತಲಿಂಗ ನಿಗ್ಗುಡಗಿ, ವೀರಾ ರೆಡ್ಡಿ, ಸುಜಯ ಬಿಸ್ವಾಸ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.