ಕಲಬುರಗಿ| ಸರಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷರಾಗಿ ನಿಜಲಿಂಗ ಕೊರಳ್ಳಿ ಆಯ್ಕೆ
Update: 2025-08-21 22:25 IST
ಕಲಬುರಗಿ: ರಾಜ್ಯ ಸರಕಾರಿ ನೌಕರರ ಸಂಘದ ಕಲಬುರಗಿ ವಿಭಾಗೀಯ ಉಪಾಧ್ಯಕ್ಷರಾಗಿ ಪಶು ಸಂಗೋಪನೆ ಇಲಾಖೆಯ ನಿಜಲಿಂಗಪ್ಪ ಕೊರಳ್ಳಿ ಅವರನ್ನು ನೇಮಿಸಿ, ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಢಕ್ಷರಿ ಅವರು ಆದೇಶಿಸಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರಿಗೌಡರ, ರಾಜ್ಯ ಗೌರವಾಧ್ಯಕ್ಷ ಬಸವರಾಜು, ಸಚಿವಾಲಯ ನೌಕರರ ಸಂಘದ ರಾಜ್ಯಾಧ್ಯಕ್ಷ ರಮೇಶ ಸಂಗಾ, ಕಲಬುರಗಿ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಜಿಲ್ಲಾ ಕಾರ್ಯದರ್ಶಿ ಮಹೇಶ ಹೂಗಾರ, ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ, ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ, ಹಿರಿಯ ಉಪಾಧ್ಯಕ್ಷ ಎಂ. ಬಿ ಪಾಟೀಲ, ಉಪಾಧ್ಯಕ್ಷ ಸಂತೋಷ ಗಂಗು, ಕ್ರೀಡಾ ಕಾರ್ಯದರ್ಶಿ ರಾಕೇಶ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.