×
Ad

ಕಲಬುರಗಿ | ಎಂಆರ್‌ಎಂಸಿಯಲ್ಲಿ ಓರಿಯೆಂಟೇಶನ್, ವೈಟ್ ಕೊಟ್ ಕಾರ್ಯಕ್ರಮ

Update: 2025-10-10 19:50 IST

ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 2025-26 ನೇ ಸಾಲಿನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಮತ್ತು ವೈಟ್ ಕೊಟ್ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಸಮಾರಂಭವನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಶರಣಗೌಡ ಪಾಟೀಲ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ.ಎಸ್.ಆರ್.ಹರವಾಳ, ಬಸವೇಶ್ವರ ಆಸ್ಪತ್ರೆಯ ಸಂಚಾಲಕರಾದ ಡಾ.ಕಿರಣ್ ದೇಶಮುಖ್, ಸದಸ್ಯರಾದ ಡಾ.ಗುರುಲಿಂಗಪ್ಪ ಪಾಟೀಲ್, ವೈಸ್ ಡೀನ್ ಡಾ.ವಿಜಯಕುಮಾರ್ ಕಪ್ಪಿಕೇರಿ, ನಿರ್ದೇಶಕರಾದ ಡಾ ಮಲ್ಲಿಕಾರ್ಜುನ ಭಂಡಾರ, ಡಾ.ಅರ್ಚನಾ ಸಿ ನಂದ್ಯಾಳ, ಡಾ.ಸುನೀಲ್ ದೇಶಮುಖ್, ಡಾ.ವಿನೋದ್ ಪ್ರಭು ಶೆಟ್ಟಿ,ಡಾ ಸರಿತಾ ಸಿಲ್ವಿಯಾ, ಡಾ.ಪೂಜಾರಿ, ಡಾ.ಮಹಾನಂದಾ ಮೇಲ್ಕುಂದಿ, ಡಾ.ವಾಯ್ ವಿ. ಕುಳಗೇರಿ ಹಾಗೂ ವಿದ್ಯಾರ್ಥಿಗಳ‌ ಪಾಲಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News