×
Ad

ಕಲಬುರಗಿ | ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ: ಪ್ರೊ.ಅಲಿ ರಜಾ ಮೂಸ್ವಿ

Update: 2025-10-10 19:36 IST

ಕಲಬುರಗಿ : ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ. ಒತ್ತಡದ ಬದುಕಿನ ಮಧ್ಯೆ ಮನಸ್ಸನ್ನು ಉಲ್ಲಾಸಿತಗೊಳಿಸಲು ಯಾವುದೇ ಕ್ರೀಡೆ ಪರಿಣಾಮಕಾರಿ ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಅಲಿ ರಜಾ ಮೂಸ್ವಿ ಹೇಳಿದ್ದಾರೆ.

ಖಾಜಾ ಬಂದಾನವಾಜ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳು ಮನಸ್ಸನ್ನು ತಾಜಾಗೊಳಿಸುತ್ತವೆ. ಕ್ರೀಡೆಯಿಂದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಕ್ರೀಡಾಂಗಣ ಪ್ರವೇಶಿಸಿದಾಗ ಜಗತ್ತನ್ನು ಮರೆತುಬಿಡುತ್ತೀರಿ ಮತ್ತು ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು.

ಕೆಬಿಎನ್ ವಿವಿಯ ಕುಲಸಚಿವ ಮೀರ್ ವಿಲಾಯತ ಅಲಿ ಇವರು ಮಾತನಾಡಿ, ಆಟಗಳಲ್ಲಿ ಗೆಲ್ಲುವುದು ಅಥವಾ ಸೋಲುವುದು ಮಹತ್ವ ಅಲ್ಲ. ನ್ಯಾಯೋಚಿತ ಆಟ ಅರ್ಥಪೂರ್ಣ. ನಿಜವಾದ ಗೆಲುವು ಎಂದರೆ ಭಾಗವಹಿಸುವಿಕೆ ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಇಂತಹ ಅವಕಾಶಗಳು ಅವಶ್ಯಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿ ಸಂಚಾರದ ಬಳಿಕ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

7 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕ್ಯಾರಮ್‌, ಚೆಸ್, ಬ್ಯಾಡ್ಮಿಂಟನ್‌, ವಾಲಿಬಾಲ್, ಥ್ರೋ ಬಾಲ್‌, ಶಾಟ್ ಪುಟ್‌, ರಂಗೋಲಿ, ಮೆಹಂದಿ, ಪೇಂಟಿಂಗ್‌, ಪೋಸ್ಟರ್‌, ಗಾಯನ, ನೃತ್ಯ ಸೇರಿದಂತೆ ವಿವಿಧ ಕ್ರೀಡೆ ಮತ್ತು ಸಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಸೂಫಿಯನ ಪ್ರಾರ್ಥಿಸಿದರೆ, ವಿದ್ಯಾರ್ಥಿ ಕಲ್ಯಾಣ ಡೀನ್‌ ಡಾ.ಅನೂಪ ಸ್ವಾಗತಿಸಿದರು. ಸಹಾಯಕ ಪ್ರಧ್ಯಪಾಕ ಡಾ.ಮಾರೂಫ ವಂದಿಸಿದರೆ, ಗಣಿತ ವಿಭಾಗದ ಮುಖ್ಯಸ್ಥೆ ಡಾ.ಸನಾ ಇಜಾಜ್ ನಿರೂಪಿಸಿದರು.

ಕೆಬಿಎನ್ ವಿವಿಯ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖಾಜಾ ಬಂದಾನವಾಜ ವಿವಿಯ ಅಕಾಡೆಮಿಕ ಡೀನ್ ಡಾ.ಜಮಾ ಮೂಸ್ವಿ, ಮೆಡಿಕಲ್ ಡೀನ ಡಾ.ಗುರು ಪ್ರಸಾದ್‌, ಇಂಜಿನಿಯರಿಂಗ್‌ ಡೀನ್ ಪ್ರೊ.ಸುಭಾಸ ಕಮಲ, ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ ಮತ್ತು ಕಾನೂನು ಡೀನ್ ಡಾ.ನಿಶಾತ ಆರೀಫ್ ಹುಸೇನಿ, ಶಿಕ್ಷಣ ವಿಭಾಗದ ಡೀನ್ ಮುಹಮ್ಮದ್‌ ಇಕ್ಬಾಲ್‌, ವಾಣಿಜ್ಯ ಡೀನ್ ಪ್ರೊ.ಶ್ರೀನಿವಾಸ ಹಾಗೂ ಎಲ್ಲ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News