×
Ad

ಕಲಬುರಗಿ| ಡಾ.ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಆ.31ರಂದು ಕವಿಗೋಷ್ಠಿ: ರವಿಕುಮಾರ ಕೋಳಕೂರ

Update: 2025-08-24 18:17 IST

ಕಲಬುರಗಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯು ಸ್ವತಂತ್ರ ಭಾರತದಲ್ಲಿ ಅತಂತ್ರ ಮಹಿಳೆ ಕಾವ್ಯಪ್ರತಿರೋಧ ಎಂಬ ಶೀರ್ಷಿಕೆಯಡಿ ವಾಡಿ ಪಟ್ಟಣದ ಡಾ.ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಆ.31 ರಂದು ಬೆಳಿಗ್ಗೆ 10:30ಕ್ಕೆ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಕವಿಗಳು ತಮ್ಮ ಸ್ವರಚಿತ ಕವನವನ್ನು ವಾಚಸಬಹುದಾಗಿದೆ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಕೋಳಕೂರ ತಿಳಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಸಂದರ್ಭದಲ್ಲಿಯೂ ಮಹಿಳೆಯರಲ್ಲಿ ಅಭದ್ರತೆ ಕಾಡುತ್ತಿದೆ, ಮಹಿಳೆ ತನ್ನ ಅಸ್ಮಿತೆ ಉಳಿವಿಗಾಗಿ ಪರಿತಪಿಸುತ್ತಿದ್ಥಾಳೆ, ದಿನ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಇದೆಲ್ಲಾ ಕಂಡು ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ತನ್ನ ಪಾಲಿಗೆ ಕನ್ನಡಿ ಒಳಗಿನ ಕಗ್ಗಂಟ್ಟಾಗಿದೆ ಎಂದು ಮರಗುವಂತಾಗಿದೆ, ಸಂವಿಧಾನ ಕೋಡಮಾಡಿದ ಸ್ವಾಂತಂತ್ರ್ಯ ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಹಾಗಾಗಿ ಸಮಸಮಾಜದ ಕನಸುಹೋತ್ತ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಯನ್ನು ಕಾವ್ಯದ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತ ಮಹಿಳೆಯರ ಮೌನದ ಮಾತುಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕವಿಗಳು ಕಾರ್ಯಕ್ರಮದ ಶೀರ್ಷಿಕೆಗೆ ತಕ್ಕಂತೆ ತಮ್ಮ ಸ್ವರಚಿತ ಕವನದೊಂದಿಗೆ ಬಂದು ಕವಿಗೋಷ್ಠಿಯಲ್ಲಿ ತಮ್ಮ ಕವನ ವಾಚನ ಮಾಡಬಹುದಾಗಿದೆ. ಆಸಕ್ತ ಕವಿಗಳು ಮೋ ಸಂ 8050950732- 9902140317ಕ್ಕೆ ಸಂಪರ್ಕಿಸಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ರವಿಕುಮಾರ ಕೋಳಕೂರ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News