ಕಲಬುರಗಿ | ನ.5 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಹೌಸಿಂಗ್ ಬೋರ್ಡ್ ಹಾಗೂ ದರ್ಗಾ ಫೀಡರ್ ಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ನ.5ರಂದು ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೌಸಿಂಗ್ ಬೋರ್ಡ ಫೀಡರ್ :
ಗಂಜ್ ಬ್ಯಾಂಕ್ ಕಾಲೋನಿ, ಗಂಜ ಬಸ್‍ಸ್ಟ್ಯಾಂಡ ಎದುರುಗಡೆ, ಭವಾನಿ ಗುಡಿ, ಈಶ್ವರಗುಡಿ, ರಾಮ ಮಂದಿರ, ಬಿಯಾನಿ, ಜಿ.ಓ.ಎಸ್ ಪ್ರದೇಶ, ಲಾಹೊಟಿ ಕಲ್ಯಾಣ ಮಂಟಪ ಹಿಂಭಾಗ ಪ್ರದೇಶ, ಆದರ್ಶ ಸ್ಕೂಲ್ ಪ್ರದೇಶ ಕೆ.ಎಚ್.ಬಿ ಕಾಲೋನಿ, ನಗರೇಶ್ವರ ಶಾಲೆ ಎದುರುಗಡೆ ಪ್ರದೇಶ, ಕಲಂತ್ರಿ ಬಿಲ್ಡಂಗ್ ಪ್ರದೇಶ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ದರ್ಗಾ ಫೀಡರ್ :
ಬಹುಮನಿ ಚೌಕ್, ಹೋಲಿ ಕಟ್ಟಾ, ಸರಾಫ್ ಬಜಾರ್, ಗಣೇಶ ಮಂದಿರ, ಚಪ್ಪಲ್ ಬಜಾರ್, ಕ್ಲಾಥ್ ಬಜಾರ್, ಸಜ್ಜನ್ ಕಾಂಪ್ಲೇಕ್ಸ್, ಫೂಲ್ ಮಾರ್ಕೆಟ್, ಮಕ್ತಾಮ್‍ಪುರ, ಜವಾಹರ್ ಹಿಂದ್ ಶಾಲೆ, ಬಕರಿಕಮೇಳಾ, ಮೋತಿ ವೈನ್ ಶಾಪ್, ನಯಾ ಮೊಹಲ್ಲಾ, ಸಂತ್ರಾಸವಾಡಿ ಲೊವರ್ ಲೇನ್, ಜಾಜಿ ಬ್ಲಾಕ್, ನ್ಯಾಷನಲ್ ಚೌಕ್, ಹಳೇ ಡಂಕಾ, ಓಲ್ಡ್ ಡಂಕಾ, ನೂರ್ ಬಾಗ್, ಡೆಕ್ಕನ್ ಪೇಪರ್, ಹಫ್ತ್ ಗುಂಬಜ್, ಜಲೀಮ್ ಕಂಪೌಂಡ್, ಮಕ್‍ಬರಾ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.