ಕಲಬುರಗಿ | ಸೆ.14 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಈ ಕೆಳಕಂಡ ಫೀಡರ್ ಗಳ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಸೆ.14ರಂದು ರವಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಸರಫ್ ಬಜಾರ್ ಫೀಡರ್ : ಸರಪ್ ಬಜಾರ್, ಕ್ಲಾಥ್ ಬಜಾರ್, ಚಪ್ಪಲ ಬಜಾರ, ಹೋಳಿ ಕಟ್ಟಾ, ಮಕ್ತಂಪೂರ್, ಸಂದಾಲ ಗಲ್ಲಿ, ಚಟ್ಟೆವಾಡಿ, ಹೊಸ ಡಂಕಾ, ಸಂತ್ರಾಸ್‍ವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಗಾಜಿಪೂರ ಫೀಡರ್ : ಅತ್ತರ ಕಂಪೌಂಡ, ಗಾಜಿಪೂರ, ಚಕ್ಕರ ಕಟ್ಟಾ ಸೂಪರ್ ಮಾರ್ಕೆಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಮಿಲನ್ ಚೌಕ್ ಫೀಡರ್ : ಮಿಲನ್‍ಚೌಕ್, ಮಟ್ಟನ್ ಮಾರ್ಕೇಟ್ ಮೇಹಾಬಾಸ್ ಏರಿಯಾ, ಗಾಜಿಪೂರ್ ಬಸವಣ್ಣ ದೇವಸ್ಥಾನ, ಸರಸ್ವತಿ ಗೋದಾಮ್, ಜಗತ್ ಪೋಸ್ಟ ಆಪೀಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಬಿ.ಎಸ್.ಎನ್‍ಎಲ್. ಫೀಡರ್ : ಸೂಪರ್ ಮಾರ್ಕೇಟ್, ಸಿಟಿ ಬಸ್ ನಿಲ್ದಾಣ, ಚೌಪಟ್ಟಿ ಕಲಬುರಗಿ ಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಲಾಲ್‍ಗೀರಿ ಫೀಡರ್ : ಲಾಲ್‍ಗೀರಿ ಕ್ರಾಸ್, ಜನತಾ ಲೇಔಟ್, ಕೈಲಾಸ್ ನಗರ, ಕಾಳೆ ಲೇಔಟ್, ಅಗ್ನಿ ಶಾಮಕ ಠಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಕಿರಣಾ ಬಜಾರ ಫೀಡರ್ : ಕಿರಾಣಾ ಬಜಾರ್, ಮಾರವಾಡಿ ಗಲ್ಲಿ, ಖಟಗಪುರ, ಕೋಟೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ವಿಠ್ಠಲನಗರ ಫೀಡರ್: ಪಿ.ಡಿ.ಎ ಇಂಜನಿಯರಿಂಗ್ ಕಾಲೇಜು, ಡಿ.ಡಿ.ಪಿ.ಐ. ಕಚೇರಿ, ವಿಜಯ-ವಿದ್ಯಾಲಯ ಕಂಪೌಂಡ್, ಐವಾನ್ ಶಾಹಿ ಅತಿಥಿಗೃಹ, ಗುಲ್ಲಾಬೌಡಿ, ಲಾಹೋಟಿ ಪೆಟ್ರೋಲ್ ಪಂಪ್, ಹೆಚ್.ಸಿ.ಜಿ ಕ್ಯಾನ್ಸ್‍ರ್ ಆಸ್ಪತ್ರೆ ಕೆ.ಬಿ.ಎನ್.ಆಸ್ಪತ್ರೆ, ಖೂಬಾ ಪ್ಲಾಟ್, ವಿಠ್ಠಲನಗರ, ಆನಂದ ನಗರ, ವಿವೇಕಾನಂದ ನಗರ, ಬಲಘಟ ಕಂಪೌಂಡ್, ಮೇಹತಾ ಕಂಪೌಂಡ್, ಮಿನಿ ವಿಧಾನಸೌಧ, ಮತ್ತು ಜೆಸ್ಕಾಂ ಕಛೇರಿ ಕೋರ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.