×
Ad

ಕಲಬುರಗಿ | ಸೆ.25 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

Update: 2025-09-24 20:26 IST

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ 110/33/11ಕೆವಿ ರುದ್ರವಾಡಿ ವಿದ್ಯುತ್ ಉಪ ವಿತರಣಾ ಕೇಂದ್ರದ ಎರಡನೇ ತ್ರೈಮಾಸಿಕ ನಿರ್ವಾಹಣಾ ಕಾರ್ಯಕೈಗೊಂಡಿರುವ ಪ್ರಯುಕ್ತ ಸದರಿ ಉಪವಿತರಣಾ ಕೇಂದ್ರದ ಎಲ್ಲಾ ಹೊರಹೋಗುವ ಫೀಡರ್ ಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಇದೇ ಸೆ.25 ರಂದು ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಎಲ್ಲಾ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ರುದ್ರವಾಡಿ ವಿದ್ಯುತ್ ವಿತರಣಾ ವಿದ್ಯುತ್ ವಿತರಣಾ ಕೇಂದ್ರ : ಎಫ್-1 ಕೊತನ ಹಿಪ್ಪರಗಾ ಎನ್.ಜೆ.ವೈ., ಎಫ್-2 ರುದ್ರವಾಡಿ ಐಪಿ, ಎಫ್3-ಮಟಕಿ ಐಪಿ, ಎಫ್-5 ಸಾಲೆಗಾಂವ ಎನ್.ಜೆ.ವೈ. ಹಾಗೂ ಎಫ್-6 ತೇಲಾಕುಣಿ ಐಪಿ ಫೀಡರಿನ ತೇಲಾಕುಣಿ, ತೀರ್ಥ, ಮಟಕಿ, ಕಿಣ್ಣಿಸುಲ್ತಾನ, ಕಿಣ್ಣಿ ಸುಲ್ತಾನ ತಾಂಡಾ, ಸಾಲೇಂಗಾವ, ಚಿತಲಿ. ಬಂಬರಗಿ, ರುದ್ರವಾಡಿ, ಜಂಬಗಾ(ಆರ್), ಕೊತನ ಹಿಪ್ಪರಗಾ, ಬಾಲಖೇಡ, ನಂದಗೂರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News